ಸೆ.16 ರಂದು ನಗರದಲ್ಲಿ ನೀರು ಇಲ್ಲ
Friday, September 12, 2025
ಮಂಗಳೂರು: ಮಂಗಳೂರು ಮಹಾನಗರಪಾಲಿಕಾ ನೀರು ಸರಬರಾಜು ವ್ಯವಸ್ಥೆಯ ತುಂಬೆ ಸ್ಥಾವರದಲ್ಲಿ ಹಾಗೂ ಮೆಸ್ಕಾಂನವರ ತುರ್ತು ದುರಸ್ತಿ ಕಾಮಗಾರಿ ಇದ್ದ ಕಾರಣ ಸೆ.16 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುತ್ತಿದ್ದು, ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.