
4ನೇ ‘ದುಬೈ ಗಡಿನಾಡ ಉತ್ಸವ’: ಲೋಗೊ ಬಿಡುಗಡೆ
Sunday, September 21, 2025
ಮಂಗಳೂರು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದ ವತಿಯಿಂದ ಅಕ್ಟೋಬರ್ 25ರಂದು ದುಬೈನಲ್ಲಿ ನಡೆಯುವ 4ನೇ ‘ದುಬೈ ಗಡಿನಾಡ ಉತ್ಸವ’ದ ಲೋಗೊವನ್ನು ದುಬೈನ ಅಬೂಹೈಲ್ ಸ್ಪೋರ್ಟ್ಸ್ ಬೈನಲ್ಲಿ ನಡೆದ ಸಮಾರಂಭದಲ್ಲಿ ದುಬೈನ ಹಿರಿಯ ಉದ್ಯಮಿ ಜೇಮ್ಸ್ ಮೆಂಡೋನ್ಸ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು ದುಬೈ ಗಡಿನಾಡ ಉತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.
ಗಡಿನಾಡ ಅಕಾಡೆಮಿ ದುಬೈ ಘಟಕದ ಅಧ್ಯಕ್ಷ ಅಮರ ದೀಪ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶಿವಶಂಕರ ನೆಕ್ರಾಜೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಽಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ದುಬೈ ಗಡಿನಾಡ ಉತ್ಸವದ ಸಂಚಾಲಕ ಝಡ್. ಎ. ಕಯ್ಯಾರ್, ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬಾಜೂರಿ, ಕೋಶಾಧಿಕಾರಿ ಅಶ್ರಫ್ ಪಿ.ಪಿ., ಪದಾಧಿಕಾರಿಗಳಾದ ಅಲಿ ಸಾಗ್, ಸುಗಂಧ ರಾಜ್ ಬೇಕಲ್, ಮಂಜುನಾಥ ಕಾಸರಗೋಡು, ಮನ್ಸೂರ್ ಪೆರ್ಲ, ವಿಜಯಕುಮಾರ ಶೆಟ್ಟಿ ಗಾಣದಮೂಲೆ, ಅನೀಶ್ ಅಡಪ್ಪ ಮಡಂದೂರು, ಶಾಕೀರ್ ಬಾಯಾರ್ ಉಪಸ್ಥಿತರಿದ್ದರು.