ಭರತನಾಟ್ಯ ಸಾಧನೆ: ರೆಮೊನಾ ಇವೆಟ್ ಪಿರೇರಾಗೆ ಎಸ್‌ಸಿಡಿಸಿಸಿ ಸನ್ಮಾನ
Tuesday, September 9, 2025
ಮಂಗಳೂರು: ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೈದಿರುವ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜ್ ನ ಅಂತಿಮ ಬಿಎ ವಿದ್ಯಾರ್ಥಿನಿ ರೆಮೊನಾ ಇವೆಟ್ ಪಿರೇರಾ ಅವರನ್ನು ಮಂಗಳವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸನ್ಮಾನಿಸಲಾಯಿತು.
ಎಸ್‌ಸಿಡಿಸಿಸಿ ಸಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್. ರಾಜೇಂಔದ್ರ ಕುಮಾರ್ ಅವರು ರೆಮೋನಾ ಇವೆಟ್ ಪಿರೇರಾ ಅವರಿಗೆ ರೂ.70000 ಗೌರವಧನ ಕೊಟ್ಟು ಸನ್ಮಾನಿಸಿದರು.
ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೈದಿರುವ ರೆಮೋನಾ ಅವರನ್ನು ಸೆ.೬ರಂದು ಬ್ಯಾಂಕಿನಲ್ಲಿ ನಡೆದ ದಿ. ಮೊಳಹಳ್ಳಿ ಶಿವರಾವ್ ಸ್ಮರಣಾರ್ಥ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಅನಿವಾರ್ಯವಾಗಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಮಂಗಳವಾರ ತಾಯಿ ಗ್ಲಾಡಿಸ್ ಪೆರೆರಾ ಅವರೊಂದಿಗೆ ಬ್ಯಾಂಕ್‌ಗೆ ಆಗಮಿಸಿದ ರೆಮೋನಾ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ವಕೀಲ ಪ್ರೇಮಾನಂದ ಕಿಣಿ ಹಾಗೂ ಜಯಪ್ರಕಾಶ್ ತುಂಬೆ ಉಪಸ್ಥಿತರಿದ್ದರು.