
ವೆನ್ಲಾಕ್ ನರ್ಸಿಂಗ್ ವಿದ್ಯಾರ್ಥಿಗಳ ಸ್ಟೈಫಂಡ್ ಸಮಸ್ಯೆ ಬಗೆಹರಿಸುವ ಕುರಿತು ವೆನ್ಲಾಕ್ ಅಧೀಕ್ಷಕರ ಜೊತೆ ಸಭೆ: ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ
ವೆನ್ಲಾಕ್ ನರ್ಸಿಂಗ್ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿದ ಅವರು ಸ್ಟೈಫಂಡ್ ಇನ್ನು ಹದಿನೈದು ದಿನದ ಒಳಗಡೆ ಬಿಡುಗುಡೆ ಮಾಡುವಂತಹ ನಿಟ್ಟಿನಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಅಲ್ಲದೆ ಹೆಲ್ತ್ ಕೇರ್ ವರ್ಕರ್ ಗಳಿಗೆ ನೀಡುವ ಹೆಪಟೈಟಿಸ್ ಬಿ ಚುಚ್ಚುಮದ್ದನ್ನು ಈ ಕೂಡಲೇ ನರ್ಸಿಂಗ್ ವಿದ್ಯಾರ್ಥಿಗಳಿಗೂ ನೀಡುವ ಕ್ರಮಕೈಗೊಳ್ಳಲಾಗುವುದು. ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗುವುದು ಎಂಬ ಭರವಸೆ ನೀಡಿರುತ್ತಾರೆ.
ಈ ಎಲ್ಲಾ ಹಿನ್ನಲೆಯಲ್ಲಿ ಇಂದು ವೆನ್ಲಾಕ್ ಅಧೀಕ್ಷಕರ ಜೊತೆ ಸೌಹಾರ್ಧ ಮಾತುಕತೆ ನಡೆಸಿ ಅವರು ಪ್ರತಿಭಟನೆ ಹಿಂಪಡೆಯಲು ವಿನಂತಿಸಿದ ಮೇರೆಗೆ ಇಂದು ಡಿವೈಎಫ್ಐ ಎಸ್ಎಫ್ಐ ನೇತೃತ್ವದಲ್ಲಿ ಸರಕಾರಿ ನರ್ಸಿಂಗ್ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನೆಯನ್ನು ನಡೆಸಲು ಬಯಸಿದ್ದ ತೀರ್ಮಾನವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ನಿರ್ಧರಿಸಿರುತ್ತೇವೆ.
ಅಧೀಕ್ಷಕರ ಜೊತೆ ನಡೆದ ಸಭೆಯಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಎಸ್ಎಫ್ಐ ಜಿಲ್ಲಾ ಅಧ್ಯಕ್ಷರಾದ ಇನಾಸ್ ಬಿ.ಕೆ, ಸಂತ್ರಸ್ತ ವಿದ್ಯಾರ್ಥಿಗಳ ಪರವಾಗಿ ಸುನಿಲ್, ಗೌತಮಿ ಬಿ ಎಂ, ಅಖಿಲಾ ,ಅಶ್ವಿನಿ, ಹಿತಶ್ರೀ ರಾವ್, ಮನೋಜ, ಜಾಯಲ್ ಮುಂತಾದವರು ಉಪಸ್ಥಿತರಿದ್ದರು.