ಮುಲ್ಕಿ-ಮೂಡಬಿದ್ರೆ ಅಭಿವೃದ್ಧಿ ಕಡಗಣೆಗೆ ಶಾಸಕ ಉಮನಾಥ್ ಕೋಟ್ಯಾನ್ ನೇರ ಹೊಣೆ: ಬಿ.ಕೆ. ಇಮ್ತಿಯಾಜ್

ಮುಲ್ಕಿ-ಮೂಡಬಿದ್ರೆ ಅಭಿವೃದ್ಧಿ ಕಡಗಣೆಗೆ ಶಾಸಕ ಉಮನಾಥ್ ಕೋಟ್ಯಾನ್ ನೇರ ಹೊಣೆ: ಬಿ.ಕೆ. ಇಮ್ತಿಯಾಜ್


ಮುಲ್ಕಿ: ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಯಾವೊಂದು ರಸ್ತೆಗಳನ್ನು ಸರಿಪಡಿಸುವಲ್ಲಿ ಶಾಸಕ ಉಮನಾಥ ಕೋಟ್ಯಾನ್ ರವರಿಗೆ ಈವರೆಗೂ ಸಾಧ್ಯವಾಗದಿರುವುರು ಆಡಳಿತ ವೈಫಲ್ಯಕ್ಕೆ ಹಿಡಿದಿರುವ ಕೈಗನ್ನಡಿ. ಇಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯಾವೊಂದು ಕೊಡುಗೆಗಳನ್ನು ಕೊಡಲು ಸಾಧ್ಯವಾಗಿಲ್ಲ ಒಟ್ಟು ಮುಲ್ಕಿ ಮೂಡಬಿದ್ರೆ ಕ್ಷೇತ್ರವನ್ನು ಕಡೆಗಣಿಸುವಲ್ಲಿ ಇಲ್ಲಿನ ಶಾಸಕರೇ ನೇರ ಹೊಣೆ ಎಂದು ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹೇಳಿದರು.


ಅವರು ಇಂದು ಮುಲ್ಕಿ ನಗರ ಪಂಚಾಯತ್ ಕಚೇರಿ ಮುಂಭಾಗ ಡಿವೈಎಫ್ಐ ಮುಲ್ಕಿ ಘಟಕದ ನೇತೃತ್ವದಲ್ಲಿ ಮುಲ್ಕಿಯಲ್ಲಿ ಕೆಟ್ಟುಹೋಗಿರುವ ರಸ್ತೆಗಳ ಸರಿಪಡಿಸಲು ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಸತನಾಡಿದರು.

ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಿಂದ ಹಿಡಿದು ರಾಜ್ಯ ಹೆದ್ದಾರಿ ಸಹಿತ ಯಾವೊಂದು ರಸ್ತೆಗಳು ಸರಿಯಾಗಿ ನಿರ್ಮಾಣಗೊಂಡಿಲ್ಲ. ಮುಲ್ಕಿ ಮೂಡಬಿದ್ರೆ ಮುಖ್ಯ ರಸ್ತೆ, ಬೈಪಾಸ್ ರಸ್ತೆ, ಮುಲ್ಕಿ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯನ್ನೊಮ್ಮೆ ಗಮನಿಸಿ ಈವರೆಗೂ ಅದನ್ನು ಸರಿಪಡಿಸಲು ಇಲ್ಲಿನ ಶಾಸಕ ಉಮಾನಾಥ ಕೊಟ್ಯಾನರಿಗೆ ಸಾಧ್ಯವಾಗಿಲ್ಲ ಎಂದರೆ  ಈ ಮುಖ್ಯರಸ್ತೆಗೆ ಹೆಸರಿಟ್ಟ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರಾದ ಕಾರ್ನಾಡು ಸದಾಶಿವ ರಾಯರಿಗೆ, ಮುಲ್ಕಿ ರಾಮಕೃಷ್ಣ ಪೂಂಜರಿಗೆ ಮಾಡಿದ ಅವಮಾನ ಎಂದರು.

ಪ್ರತಿಭಟನೆಯಲ್ಲಿ  ಡಿವೈಎಫ್ಐ ಜಿಲ್ಲಾ ಮುಖಂಡರಾದ ತಯ್ಯೂಬ್ ಬೆಂಗರೆ, ಮಕ್ಸೂದು, ಅಜ್ಮಲ್, ಶ್ರೀನಾಥ್ ಕಾಟಿಪಳ್ಳ, ರಮೇಶ್ ಮುಲ್ಕಿ, ರಿಯಾಜ್ ಕಾರ್ನಾಡ್, ಅಸ್ಲಾಂ, ಇಲಿಯಾಝ್, ಸುನೀಲ್, ರಮೇಶ್ ಗೇರುಕಟ್ಟೆ, ವಸಂತ, ಚಂದ್ರಕಾಂತ್ ಪೈ, ಮುಂತಾದವರು ಉಪಸ್ಥಿತರಿದ್ದರು.

ಡಿವೈಎಫ್ಐ ಮುಲ್ಕಿ ಘಟಕದ ಮುಖಂಡ ಸಾಧಿಕ್ ಕಿಲ್ಪಾಡಿ ಸ್ವಾಗತಿಸಿ ನಿರೂಪಿಸಿದರು. 

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article