ಬ್ರಹ್ಮಕುಮಾರೀಸ್ ಮಂಗಳೂರಿನ ಕೇಂದ್ರಕ್ಕೆ ವೀರಶೈವ ಧರ್ಮದ ಗುರುಗಳು ಭೇಟಿ

ಬ್ರಹ್ಮಕುಮಾರೀಸ್ ಮಂಗಳೂರಿನ ಕೇಂದ್ರಕ್ಕೆ ವೀರಶೈವ ಧರ್ಮದ ಗುರುಗಳು ಭೇಟಿ


ಮಂಗಳೂರು: ಬ್ರಹ್ಮಕುಮಾರೀಸ್ ಮಂಗಳೂರಿನ ಕೇಂದ್ರಕ್ಕೆ ಇಂದು ವೀರಶೈವ ಧರ್ಮದ ಗುರುಗಳು ಹಾಗೂ ಗಣ್ಯರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟ ದೇವರು, ಶ್ರೀ ಶಿವಾನಂದ ಮಹಾಸ್ವಾಮಿಗಳು ಹಂದಿಗುಂದ, ಶ್ರೀ ಬಸವಲಿಂಗ ಸ್ವಾಮಿಗಳು ಗವಿಮಠ ನವಲಗುಂದ, ಶ್ರೀ ಶಿವಾನಂದ ಮಹಾಸ್ವಾಮಿಗಳು ಹೂಲಸೂರ, ಶ್ರೀ ಮಹಾಂತಪ್ರಭು ಸ್ವಾಮಿಗಳು ಶೇಗುಣಸಿ, ಶ್ರೀ ಬಸವ ದೇವರು ಬಸವಕಲ್ಯಾಣ, ಶ್ರೀ ಬಸವಾನಂದ ಸ್ವಾಮಿಗಳು ಮಮ್ಮಿಗಟ್ಟಿ, ಶ್ರೀ ವೀರಭದ್ರ ಸ್ವಾಮಿಗಳು ರಾಯಚೂರು ಸೇರಿದಂತೆ ಹಲವಾರು ಧಾರ್ಮಿಕ ಕ್ಷೇತ್ರದ ಮಹನೀಯರು ಆಗಮಿಸಿದರು.

ಈ ಸಂದರ್ಭದಲ್ಲಿ ಬಿ.ಕೆ. ವಿಶ್ವೇಶ್ವರಿ ಅವರು ಸ್ವಾಗತ ಸಲ್ಲಿಸಿ, ಆತ್ಮಶಕ್ತಿ, ಧಾರ್ಮಿಕ ಸೌಹಾರ್ದ, ಶಾಂತಿಯ ಸಂದೇಶ ಹಾಗೂ ಪರಮಾತ್ಮನಿಂದ ಸಿಗುವ ದೈವೀ ಮಾರ್ಗದರ್ಶನದ ಕುರಿತು ಈಶ್ವರಿಯ ಸಂದೇಶವನ್ನು ಹಂಚಿಕೊಂಡರು.

ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಸೇವಾಕಾರ್ಯ, ನೈತಿಕ ಮೌಲ್ಯಗಳ ಬೆಳವಣಿಗೆ ಮತ್ತು ಸಮಾಜದ ಶ್ರೇಯೋಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಕುರಿತು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಲವು ಬ್ರಹ್ಮಕುಮಾರಿಗಳು, ಬ್ರಹ್ಮಕುಮಾರಿಯರು ಹಾಗೂ ಸೇವಾಭಿಮಾನಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article