ಧರ್ಮಸ್ಥಳ ಪ್ರಕರಣ: ಐವರ ವಿಚಾರಣೆ

ಧರ್ಮಸ್ಥಳ ಪ್ರಕರಣ: ಐವರ ವಿಚಾರಣೆ

ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಸೌಜನ್ಯ ಮಾವ ವಿಠಲ ಗೌಡ, ಸಹಚರ ಪ್ರದೀಪ್, ಹೋರಾಟಗಾರರಾದ ಜಯಂತ್, ಗಿರೀಶ್ ಮಟ್ಟೆಣ್ಣವರ್ ಹಾಗೂ ಅಭಿಷೇಕ್‌ರನ್ನು ವಿಚಾರಣೆ ಮಾಡಿದೆ.

ಎರಡು ದಿನಗಳ ವಿರಾಮದ ಬಳಿಕ ವಿಠಲ ಗೌಡ ವಿಚಾರಣೆಗೆ ಹಾಜರಾದರೆ, ಯೂಟ್ಯೂಬರ್ ಅಭಿಷೇಕ್ ಸೆ.10 ರಂದು ವಿಚಾರಣೆ ಮುಗಿಸಿ ತೆರಳಿದ್ದರು. ಮತ್ತೆ ನೋಟಿಸ್ ನೀಡಿ ಕರೆಸಿದ ಕಾರಣ ಮಧ್ಯಾಹ್ನ ಎಸ್‌ಐಟಿ ಮುಂದೆ ಹಾಜರಾದರು. ಅಭಿಷೇಕ್ ಹಾಸನದಿಂದ ನೇರವಾಗಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಈ ಐದು ಮಂದಿ ಕೂಡ ಸಂಜೆ ವರೆಗೆ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article