ಸೌಜನ್ಯ ಪ್ರಕರಣ: ಉದಯ ಜೈನ್‌ನನ್ನು ಪ್ರಶ್ನಿಸದ ಎಸ್‌ಐಟಿ
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೆ ನೀಡಿ ಬಂಧಿತನಾಗಿರುವ ಮುಸುಕುಧಾರಿ ಚಿನ್ನಯಯ್ಯನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿರುವ ನಡುವೆಯೇ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿದ್ದ ಉದಯ್ ಜೈನ್‌ನನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿರುವುದು ಭಾರೀ ಕುತೂಹಲ ಮೂಡಿಸಿತ್ತು. ಆದರೆ ಸೌಜನ್ಯ ಪ್ರಕರಣದ ಕುರಿತಂತೆ ಎಸ್‌ಐಟಿ ಯಾವುದೇ ಪ್ರಶ್ನೆಯನ್ನು ಉದಯ ಜೈನ್‌ಗೆ ಕೇಳಿಲ್ಲ ಎನ್ನಲಾಗಿದೆ.
ಉದಯ ಜೈನ್‌ನನ್ನು ಎಸ್‌ಐಟಿ ವಿಚಾರಣೆ ನಡೆಸಿದ್ದು ಸೌಜನ್ಯ ಪ್ರಕರಣದ ವಿಚಾರವಾಗಿ ಅಲ್ಲ. ಬದಲಿಗೆ ಚಿನ್ನಯ್ಯ ಹೇಳಿಕೆ ಆದಾರದಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮೃತ ದೇಹಗಳನ್ನು ಹೂತು ಹಾಕಲು ಸೂಚನೆ ನೀಡುವುದು. ಮತ್ತು ಕೊಲೆಯಾದ ಮಹಿಳೆಯರ ಬಗ್ಗೆ ಇವರಿಗೆಲ್ಲಾ ಮಾಹಿತಿ ಇದೆ ಎಂದು ಚಿನ್ನಯ್ಯ ಹೇಳಿಕೆ ನೀಡಿದ್ದ. ಚಿನ್ನಯ್ಯನ ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಯ ಸತ್ಯಸತ್ಯತೆ ಬಗ್ಗೆ ಉದಯ್ ಜೈನ್‌ನನ್ನು ವಿಚಾರಣೆ ನಡೆಸಲಾಗಿದೆ.
ಎಸ್‌ಐಟಿ ಸೌಜನ್ಯ ವಿಚಾರವಾಗಿ ಯಾವುದೇ ಪ್ರಶ್ನೆ ಕೇಳಲಿಲ್ಲ. ಚಿನ್ನಯ್ಯನ ಬಗ್ಗೆಯೂ ಕೇಳಿಲ್ಲ, ವಿದ್ಯಾಬ್ಯಾಸ, ಉದ್ಯೋಗ, ಕುಟುಂಬದ ಎಲ್ಲಾ ವಿಚಾರದ ಬಗ್ಗೆ ಹಾಗೂ ಧರ್ಮಸ್ಥಳ ಸುತ್ತಾಮುತ್ತ ಹೆಣಗಳ ಹೂತಿರೋ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಈ ನಡುವೆ ಸೌಜನ್ಯ ಪ್ರಕರಣದಲ್ಲಿ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿರುವುದರಿಂದ ಎಸ್‌ಐಟಿ ಈ ಪ್ರಕರಣದ ಕುರಿತಂತೆ ವಿಚಾರಣೆ ನಡೆಸುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ. ಯಾವುದಾದರೂ ಪ್ರಬಲವಾದ ಸಾಕ್ಷ್ಯ ದೊರೆತು ಸೌಜನ್ಯ ತಾಯಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೆ ಪ್ರಕರಣ ಮತ್ತೆ ತೆರೆಯುವ ಸಾಧ್ಯತೆಯಿದೆ.
ತಪ್ಪೊಪಿಗೆ..
ಧರ್ಮಸ್ಥಳ ಪ್ರಕರಣ ಹಾಗೂ ಅನನ್ಯ ಭಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯೂಟ್ಯೂಬರ್ ಅಭಿಷೇಕ್‌ನನ್ನು ಎಸ್‌ಐಟಿ ತೀವ್ರ ವಿಚಾರಣೆ ನಡೆಸಿದೆ. ಆರು ತಿಂಗಳ ಹಿಂದೆ ಗಿರೀಶ್ ಮಟ್ಟಣ್ಣನವರ್‌ನನ್ನು ಸಂಪರ್ಕಿಸಿದ್ದ ಅಭೀಷೇಕ್, ಲೈಕ್ಸ್ ಹಾಗು ವೀವ್ಸ್ ಗಾಗಿ ವಿಡಿಯೋ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಯುನೈಟೆಡ್ ಮೀಡಿಯಾ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಅಭಿಷೇಕ್,ಜಯಂತ್ ಜೊತೆಗೂಡಿ ರಾತ್ರಿ ಹೊತ್ತು ಬಂಗ್ಲೆಗುಡ್ಡೆಗೆ ಭೇಟಿ ನೀಡಿ ವಿಡಿಯೋ ಮಾಡಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಯೂಟ್ಯೂಬಸ್‌ಗೆ ಎಸ್‌ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ.