ಯುಟ್ಯೂಬರ್ ಸಮೀರ್ ಮನೆಗೆ ಪೊಲೀಸ್ ದಾಳಿ
ಮಂಗಳೂರು: ಧರ್ಮಸ್ಥಳದ ಕುರಿತು ಎಐ ವಿಡಿಯೋ ಸೃಷ್ಟಿಸಿದ ವಿಚಾರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆರೋಪಿತ ಯೂಟ್ಯೂಬರ್ ಸಮೀರ್.ಎಂ.ಡಿ. ಬೆಂಗಳೂರು ನಿವಾಸಕ್ಕೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಗೆ ೨ ಬಾರಿ ಹಾಜರಾಗಿದ್ದ ಸಮೀರ್ ಎಂ.ಡಿ. ಬಳಿಕ ಸಮರ್ಪಕವಾಗಿ ತನಿಖೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಈ ಹಿನ್ನಲೆ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಮತ್ತು ತಂಡ ಎಫ್.ಎಸ್.ಎಲ್. ವಿಭಾಗದ ಸೋಕೊ ಸಿಬಂದಿ ಜತೆಯಲ್ಲಿ ಸೆ.೪ ರಂದು ಮಾದ್ಯಾಹ್ನ 1.40 ಕ್ಕೆ ಸರಿಯಾಗಿ ಬೆಂಗಳೂರಿನ ಬನ್ನೇರುಘಟ್ಟದ ಹುಳ್ಳಹಲ್ಲಿಯಲ್ಲಿರುವ ಸಮೀರ್‌ನ ಬಾಡಿಗೆ ಮನೆಗೆ ದಾಳಿ ನಡೆಸಿದೆ.
ಬೆಳ್ತಂಗಡಿ ನ್ಯಾಯಾಲಯದಿಂದ ಸೆ.3 ರಂದು ಸರ್ಚ್ ವಾರಂಟ್ ಪಡೆದು ತೆರಳಿದ್ದ ತಂಡ ದಾಳಿ ವೇಳೆ ಎಐ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಆತನ ಮನೆಯಿಂದ ಜಪ್ತಿ ಮಾಡುವ ಸಾಧ್ಯತೆ ಕಂಡುಬಂದಿದೆ.
ಸಮೀರ್ ತನಿಖೆ ವೇಳೆ ನನಗೆ ಅಲ್ಲಿ ನಡೆದ ಘಟನೆ ಬಗ್ಗೆ ತಿಳಿಸಿದಂತೆ ಎಐ ವಿಡಿಯೋ ರಚಿಸಿದ್ದೆ. ಈ ಬಗ್ಗೆ ನನಗೆ ಸ್ಪಷ್ಟನೆ ಇಲ್ಲ ಎಂದಿದ್ದ. ಮತ್ತೊಂದೆಡೆ ವಿಡಿಯೋ ಪ್ರಸಾರದ ಮುನ್ನ ಅದರಲ್ಲಿ (ಆಹಾಕಿಯೇ ಹಾಕಿರುವುದಾಗಿ ಹೇಳಿಕೆ ನೀಡಿದ್ದ. ಬಳಿಕ ಈತ ತನಿಖೆಗೆ ಸೂಕ್ತ ಸ್ಪಂದನೆ ನೀಡದ ಕಾರಣ ಆತನ ಮನೆ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಜಯಂತ್ ವಿಚಾರಣೆ..
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಜಯಂತ್ ಟಿ. ಗುರುವಾರ ಅಪರಾಹ್ನ ವಿಚಾರಣೆಗೆ ಆಗಮಿಸಿದ್ದಾರೆ.