ಯತ್ನಾಳ್ ಕೂಡಲೇ ಕ್ಷಮೆ ಯಾಚಿಸಲಿ, ಇಲ್ಲದಿದ್ದಲ್ಲಿ ತೀವ್ರ ಹೋರಾಟ: ಆರ್. ಧರ್ಮಸೇನಾ ಎಚ್ಚರಿಕೆ

ಯತ್ನಾಳ್ ಕೂಡಲೇ ಕ್ಷಮೆ ಯಾಚಿಸಲಿ, ಇಲ್ಲದಿದ್ದಲ್ಲಿ ತೀವ್ರ ಹೋರಾಟ: ಆರ್. ಧರ್ಮಸೇನಾ ಎಚ್ಚರಿಕೆ


ಮಂಗಳೂರು: ಮೈಸೂರು ದಸರಾ ಉದ್ಘಾಟನೆಯ ವಿಚಾರದಲ್ಲಿ ದಲಿತ ಮಹಿಳೆಯರ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ತೀವ್ರ ಹೋರಾಟ ಮಾಡಲಾಗುವುದು ಎಂದ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ, ಮಾಜಿ ಎಂಎಲ್ಸಿ ಆರ್. ಧರ್ಮಸೇನಾ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾತ್ನಾಳ್ ಅವರು ಶಾಸಕರಾಗಿ,ಕೇಂದ್ರ ಸಚಿವರಾಗಿ, ರಾಜಕೀಯವಾಗಿ ಎತ್ತರಕ್ಕೇರಿದ ವ್ಯಕ್ತಿ. ಅವರು ಈ ರೀತಿ ಅಂದುಕೊಂಡಿರಲಿಲ್ಲ. ಆದರೆ ಅವರು ಪರಿಶಿಷ್ಟ ಜಾತಿ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ.ಯತ್ನಾಳ್ ಈ ವಿಚಾರದಲ್ಲಿ ಕ್ಷಮೆಯಾಚನೆ ಮಾಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಅವರಿಗೆ ಸರಿಯಾದ ಪಾಠವನ್ನು ಪರಿಶಿಷ್ಟ ಜಾತಿಯವರು ಕಲಿಸುತ್ತಾರೆ. ಪರಿಶಿಷ್ಟ ಜಾತಿಯವರನ್ನು ಲಘವಾಗಿ ಯತ್ನಾಲ್ ಲಘವಾಗಿ ಪರಿಗಣಿಸುವುದು ಬೇಡ ಎಂದು ಹೇಳಿದರು. 

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಧರ್ಮ ಸೇನಾ ಅವರು ಕಳೆದ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 2-3 ಕಡೆ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಸುಳ್ಯದಲ್ಲಿ ಚುನಾವಣೆ ಪೂರ್ವದಲ್ಲಿ ಇಬ್ಬರ ನಡುವೆ ಉಂಟಾಗಿದ್ದ ವಿವಾದವನ್ನು ಬಗೆಹರಿಸಲು ತಾನು ಪ್ರಯತ್ನಿಸಿದ್ದೆ ಎಂದು ಹೇಳಿದರು. 

ತಾನು ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ಎರಡೂವರೆ ವರ್ಷಗಳಲ್ಲಿ ರಾಜ್ಯಾದ್ಯಂತ ೨೫ ಸಾವಿರ ಪದಾಧಿಕಾರಿಗಳನ್ನು ಎಸ್ಸಿ ವಿಭಾಗಕ್ಕೆ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಕಾರ್ಯಯೋಜನೆ ರೂಪಿಸಲಾಗುವುದು ಎಂದು ಧರ್ಮಸೇನಾ ತಿಳಿಸಿದರು. 

ನಿಗಮ , ಮಂಡಳಿ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಗಳಲ್ಲಿ ಕಾಂಗ್ರೆಸ್ ದಲಿತ ಸಮುದಾಯದ ಹಲವು ಮಂದಿ ನಾಯಕರಿಗೆ ಅವಕಾಶ ನೀಡಿದೆ ಎಂದು ಧರ್ಮಸೇನಾ ಹೇಳಿದರು. 

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ದಿನೇಶ್ ಮೂಳೂರು, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಕಣಿರಾಮ್ ರಾಥೋಡ್, ಸಂಚಾಲಕ ಕಾಳಯ್ಯ ಮೈಸೂರು, ಪ್ರಮುಖರಾದ ಪ್ರೇಮ್ ಬಲ್ಲಾಳ್‌ಬಾಗ್, ಟಿ. ಹೊನ್ನಯ್ಯ, ಲಕ್ಷ್ಮೀ ಕಡಬ, ರವಿ ಸುಂಕದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article