ಧರ್ಮಸ್ಥಳ ಪ್ರಕರಣ: ಎಸ್‌ಐಟಿ ವಿಚಾರಣೆಗೆ ಗ್ರಾಂ.ಪಂ. ಮಾಜಿ ಅಧ್ಯಕ್ಷರುಗಳು
Monday, September 29, 2025
ಮಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ವಿಚಾರಣೆಗಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್‌ನ ನಾಲ್ವರು ಮಾಜಿ ಅಧ್ಯಕ್ಷರುಗಳನ್ನು ಕರೆಸಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ನಾಲ್ಕು ಮಂದಿ ಮಾಜಿ ಅಧ್ಯಕರಾದ ಕೇಶವ್ ಬೆಳಾಲ್, ಪ್ರಭಾಕರ್, ಗೀತಾ, ಚಂದನ್ ಕಾಮತ್ ಅವರನ್ನು ಸೆ.29 ರಂದು ಎಸ್.ಐ.ಟಿ ವಿಚಾರಣೆ ಹಾಜರಾಗಿದ್ದಾರೆ.
ಈ ನಾಲ್ಕು ಮಂದಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಯುಡಿಆರ್ ಪ್ರಕರಣದಲ್ಲಿ ಶವ ಹೂತ ಬಗ್ಗೆ ತನಿಖೆಗಾಗಿ ಕರೆಸಲಾಗಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ಸಂಬಂಧಿಸಿದಂತೆ 1986 ರಿಂದ 2014 ರವರೆಗೆ ಒಟ್ಟು 279 ಯುಡಿಆರ್ ಪ್ರಕರಣ ದಾಕಲಾಗಿದೆ. ಅವುಗಳಲ್ಲಿ 219 ಪುರುಷ, 46 ಮಹಿಳೆ, 13 ಲಿಂಗ ಪತ್ತೆಯಿಲ್ಲದ್ದು, 1 ನವಜಾತ ಶಿಶುವಿನ ದಾಖಲೆಗಳು ಪಂಚಾಯತ್‌ನಲ್ಲಿದೆ. ಈ ವಿಚಾರವಾಗಿ ತನಿಖೆ ನಡೆದಿದೆ ಎನ್ನಲಾಗಿದೆ.