ಕದ್ರಿ ದೇವಸ್ಥಾನಕ್ಕೆ ಸೌಜನ್ಯ ಪರ ಹೋರಾಟಗಾರರು ಭೇಟಿ: ವಿಶೇಷ ಪ್ರಾರ್ಥನೆ
Tuesday, September 16, 2025
ಮಂಗಳೂರು: ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಮಂಗಳವಾರ ಸೌಜನ್ಯ ಪರ ಹೋರಾಟಗಾರರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸೌಜನ್ಯ ತಾಯಿ ಕುಸುಮಾವತಿ, ಮಾವ ವಿಠಲ ಗೌಡ, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಸೇರಿ ಹಲವರು ಈ ವೇಳೆ ಉಪಸ್ಥಿತರಿದ್ದರು.
ಸಂಕ್ರಮಣ ಹಿನ್ನೆಲೆಯಲ್ಲಿ ಮಂಜುನಾಥನಿಗೆ ಪೂಜೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಕ್ಷೇತ್ರದ ಅಣ್ಣಪ್ಪ ದೈವ ಸಾನಿಧ್ಯದಲ್ಲೂ ಪ್ರಾರ್ಥನೆ ಸಲ್ಲಿಸಿದರು. ಸಂಕ್ರಮಣ ದಿನವಾದ ಮಂಗಳವಾರ ಎಲ್ಲ ಮಠ ಮಂದಿರ ದೈವಸ್ಥಾನದಲ್ಲಿ ಎಸ್‌ಐಟಿ ತಂಡಕ್ಕೆ ಸತ್ಯ ಹೊರತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಸಲ್ಲಿಸಲು ತಿಮರೋಡಿ ಕರೆ ಕೊಟ್ಟಿದ್ದರು.
ಅದರಂತೆ ಎಸ್‌ಐಟಿಗೆ ಶಕ್ತಿ ತುಂಬಲು ದೇವರಲ್ಲಿ ಪ್ರಾರ್ಥಿಸಿದರು.