.jpeg)
ಬೃಹತ್ ಜನಾಗ್ರಹ ಸಭೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ: ಶಾಸಕ ಕಾಮತ್
ಕಳೆದ ಕೆಲವಾರು ದಿನಗಳಿಂದ ಹಿಂದೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪೊಲೀಸರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಧಕ್ಕೆ ನಿಲ್ಲಿಸುವುದು, ಸೌಂಡ್ ಬಾಕ್ಸ್ ಗಳನ್ನು ಎತ್ತಿಕೊಂಡು ಹೋಗುವುದು ಮೊದಲಾದ ಕ್ರಮಗಳಿಂದ ಜನರಿಗೆ ಕಿರುಕುಳ ನೀಡುತ್ತಿದೆ. ನೀತಿ ನಿಯಮಗಳೆಲ್ಲವೂ ಹಿಂದಿನ ಬಿಜೆಪಿ ಸರ್ಕಾರದಲ್ಲೂ ಇತ್ತು. ಆಗ ಜನಸಾಮಾನ್ಯರ ಆಚರಣೆಗಳಿಗೆ, ಧಾರ್ಮಿಕ ಭಾವನೆಗಳಿಗೆ ಯಾವುದೇ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿದ್ದೆವು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ದಬ್ಬಾಳಿಕೆ ನಡೆಸುತ್ತಿದೆ ಎಂದರು.
ಸರ್ಕಾರದ ಈ ನಿರ್ಧಾರ ರಂಗಭೂಮಿ ಕಲಾವಿದರು, ಯಕ್ಷಗಾನ ಕಲಾವಿದರು, ದೈವ ನರ್ತಕರು, ತುಳು ಚಿತ್ರರಂಗ ಕಲಾವಿದರು, ನಿರೂಪಕರು, ಫೋಟೊಗ್ರಾಫರ್ ಗಳು, ಹೀಗೆ ಎಲ್ಲರ ನೆಮ್ಮದಿಯ ಬದುಕಿಗೂ ಕಂಟಕ ತಂದಿದೆ. ಸೆಪ್ಟೆಂಬರ್ 9, ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಕದ್ರಿ ಪಾರ್ಕ್ ಬಳಿ ಇರುವ ಗೋರಕ್ಷನಾಥ ಮಂದಿರದಲ್ಲಿ ನಡೆಯಲಿರುವ ಈ ಬೃಹತ್ ಜನಾಗ್ರಹ ಸಭೆಯು ನಮ್ಮ ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಸುವ ಜೊತೆಗೆ ಆ ಕ್ಷೇತ್ರಗಳಲ್ಲಿ ವೃತ್ತಿ ಜೀವನವನ್ನು ತೊಡಗಿಸಿಕೊಂಡಿರುವ ಸಾವಿರಾರು ಕುಟುಂಬಗಳಿಗೆ ನ್ಯಾಯ ಒದಗಿಸುವುದು ಹಾಗೂ ಆಳುವ ವರ್ಗವನ್ನು ಎಚ್ಚರಿಸುವ ಕೆಲಸವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.