.jpeg)
ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿ ಯಾಗಿರೋದು ಇವಿಎಂ ಮೂಲಕ ನಡೆದ ಚುನಾವಣೆಯಲ್ಲಿ, ಬ್ಯಾಲೆಟ್ ಪೇಪರ್‌ನಲ್ಲಿ ಅಲ್ಲ: ಸತೀಶ್ ಕುಂಪಲ
Monday, September 8, 2025
ಮಂಗಳೂರು: ಮತಗಳ್ಳತನ ಆಗಿದೆ, ಇವಿಎಂ ಹ್ಯಾಕ್ ಆಗಿದೆ ಎಂದು ಜನರ ಎಂದುರು ದೊಂಬರಾಟ ನಡೆಸುತ್ತಿರುವ ರಾಹುಲ್ ಗಾಂಧಿಯ ಮನಸ್ಸು ಗೆಲ್ಲಲು ಸಿದ್ದರಾಮಯ್ಯರವರು ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣಾ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ನಿರ್ಧರಿಸಿದ್ದಾರೆ. ಆದರೆ ಸಿದ್ದರಾಮಯ್ಯ ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿರೋದು ಇವಿಎಂ ಮೂಲಕ ನಡೆದ ಚುನಾವಣೆಯಲ್ಲಿ ಎನ್ನುವುದನ್ನು ಮರೆಯುವುದು ಬೇಡ ಎಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಗೆದ್ದಾಗ ಮತಯಂತ್ರದ ಬಗ್ಗೆ ಚಕಾರ ಎತ್ತದೆ, ಸೋತಾಗ ಸಂಶಯ ವ್ಯಕ್ತಪಡಿಸುವ ನಾಟಕವನ್ನು ಮತದಾರರು ಅರಿತಿದ್ದಾರೆ. ಬ್ಯಾಲೆಟ್ ಪೇಪರ್ ಮೂಲಕ ಹಿಂದೆ ಅಕ್ರಮ ಎಸಗಿ ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್‌ಗೆ ಪಾರದರ್ಶಕ ಚುನಾವಣೆ ಬೇಕಿಲ್ಲ. ಅಕ್ರಮವಾಗಿಯಾದರೂ ಅಧಿಕಾರಕ್ಕೆ ಏರಬೇಕೆಂಬ ಒಂದೇ ಸಿದ್ಧಾಂತಕ್ಕೆ ಅಂಟಿ ಬಿದ್ದಂತೆ ವರ್ತಿಸುತ್ತಿದೆ ಎಂದು ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.