ದೇಶಪಾಂಡೆ ಹೇಳಿಕೆಗೆ ಖಂಡನೆ
ಮಂಗಳೂರು: ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಶಾಸಕ ಆರ್.ವಿ. ದೇಶಪಾಂಡೆ ಅವರು ನೀಡಿರುವ ಅಪ್ರಬುದ್ಧ ಹೇಳಿಕೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.
ತಮ್ಮದೇ ಪಕ್ಷದ ವೇದಿಕೆಯಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಕೊಟ್ಟಿದ್ದೇವೆ ಎಂದು ಅನೇಕ ಸಲ ಹೇಳುತ್ತಾರೆ. ಮತ್ತೊಂದೆಡೆ ಈ ರೀತಿ ಅಪ್ರಬುದ್ಧ ಹೇಳಿಕೆಗಳನ್ನು ಕೊಟ್ಟು ಮಹಿಳೆಯರನ್ನು ಮತ್ತು ಪತ್ರಕರ್ತರನ್ನು ಅವಮಾನಿಸುತ್ತಾರೆ. ಇದರಿಂದ ಮಹಿಳೆಯರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇರುವ ಗೌರವ ಏನೆಂದು ಗೊತ್ತಾಗುತ್ತದೆ. ಶಾಸಕರು ಇಂತಹ ಮನಸ್ಥಿತಿಯಿಂದ ಹೊರಬರದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯ ಬೇಡಿಕೆ ಬಹಳ ವರ್ಷಗಳಿಂದ ಇದ್ದು ಅದನ್ನು ನಿರ್ಲಕ್ಷ ಮಾಡಿ ಉಡಾಫೆ ಉತ್ತರ ಕೊಡುವ ಬದಲು ಸಚಿವರ ಅಂದು ಈಡೇರಿಸುವ ಬಗ್ಗೆ ಆಶ್ವಾಸನೆ ಕೊಡುವ ಬದಲು ಓರ್ವ ಪತ್ರಕರ್ತರಿಗೆ ಅಪಮಾನ ಮಾಡೋದು ಅತ್ಯಂತ ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.