ಕಟೀಲು ನ್ಯಾಯಬೆಲೆ ಅಂಗಡಿಯಲ್ಲಿ ಅವ್ಯವಹಾರ: ಸತೀಶ್ ಕಟೀಲು
ಕಟೀಲು ನ್ಯಾಯಬೆಲೆ ಅಂಗಡಿಯಲ್ಲಿ ಗೋಚಿಚೀಲಕ್ಕೆ ದರ ಪಡೆಯುತ್ತಿರುವ ಬಗ್ಗೆ ಇತ್ತೀಚೆಗೆ ವಿಡಿಯೋ ವೈರಲ್ ಆದ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟೀಕರಣ ನೀಡಿದರು.
ಅಕ್ಕಿ ಕೊಂಡೊಯ್ಯಲು ಗೋಣಿ ನೀಡಬೇಕಾದರೆ 50 ರೂ. ನೀಡಬೇಕು ಎಂದು ಅಂಗಡಿಯ ದೀಪಾ ನಾಯಕ್ ಎಂಬವರು ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ವಾಗ್ವಾದ ನಡೆದಿದೆ. ಈ ಸಂದರ್ಭ ನಾನು ವಿಡಿಯೋ ಮಾಡಿದಾಗ ಒಂದು ಗೋಣಿಗೆ 20 ರೂ. ನೀಡಬೇಕು ಎಂದು ಮಾತು ಬದಲಿಸಿದ್ದರು. ಗೋಣಿಗೆ ಹಣ ನೀಡಬೇಕು ಎಂದು ಆಹಾರ ಇಲಾಖೆ ಅಽಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡಿದ ಬಳಿಕ ಸರಕಾರದ ಆದೇಶದ ಬಗ್ಗೆ ನಮಗೆ ಮನವರಿಕೆ ಆಗಿದೆ ಎಂದರು.
ವಿಡಿಯೋವನ್ನು ಸ್ಥಳೀಯ ವಾಟ್ಸಪ್ ಗ್ರೂಪ್ವೊಂದರಲ್ಲಿ ನಾನು ಪೋಸ್ಟ್ ಮಾಡಿದ್ದೆ. ಅದು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಪ್ರಕಟಗೊಂಡು ವೈರಲ್ ಆಗಿದೆ. ಅಽಕಾರಿಗಳಿಂದ ಸ್ಪಷ್ಟನೆ ದೊರೆತ ಬಳಿಕ ಪೊಲೀಸರ ಸೂಚನೆಯಂತೆ ವಿಡಿಯೋ ಡಿಲೀಟ್ ಮಾಡುವಂತೆ ನಾನು ವಿನಂತಿಸಿದ್ದೆ ಎಂದು ಹೇಳಿದರು.
ಕಟೀಲು ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರೊಂದಿಗೆ ಮಾತನಾಡುವ ಕ್ರಮ ಸರಿಯಿಲ್ಲ. ಪ್ರಶ್ನೆ ಮಾಡಿದರೆ ಗದರಿಸುವ ಜತೆಗೆ ರಾಜಕಾರಣಿಯೊಬ್ಬರ ಹೆಸರು ಹೇಳಿ ಬಾಯಿ ಮುಚ್ಚಿಸುತ್ತಿದ್ದಾರೆ. ರಾಜ್ಯ ಹೆದ್ದಾರಿ ಬದಿಯಲ್ಲಿ ನ್ಯಾಯಬೆಲೆ ಅಂಗಡಿಯಿದೆ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ನಮ್ಮ ಕುಟುಂಬದಲ್ಲಿ 10 ಮಂದಿ ಇದ್ದು, ತಿಂಗಳಿಗೆ 100 ಕೆ.ಜಿ. ಅಕ್ಕಿ ಪಡೆಯುತ್ತಿರುವುದು ನಿಜ. ನಮ್ಮ ಕುಟುಂಬದಲ್ಲಿ ಸಾಲ ಮಾಡಿ ಕಾರು ಖರೀದಿಸಲಾಗಿದೆ. ಪ್ರತ್ಯೇಕ ಪಡಿತರ ಕಾರ್ಡ್ಗೆ ಅರ್ಜಿ ಸಲ್ಲಿಸಿದರೂ, ಕಾರ್ಡ್ ದೊರೆತಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಜಯ ಕೊಂಡೇಲ, ಮೀನಾಕ್ಷಿ, ದೇವಕಿ ಉಪಸ್ಥಿತರಿದ್ದರು.