ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ- ತಪ್ಪುಗಳನ್ನು ಅರಿತು ತಿದ್ದುವವನೇ ನೈಜ ಶಿಕ್ಷಕ: ಪ್ರೊ. ಡಾ. ಗಣೇಶ್ ಎಸ್. ಪೈ

ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ- ತಪ್ಪುಗಳನ್ನು ಅರಿತು ತಿದ್ದುವವನೇ ನೈಜ ಶಿಕ್ಷಕ: ಪ್ರೊ. ಡಾ. ಗಣೇಶ್ ಎಸ್. ಪೈ


ಮಂಗಳೂರು: ವಿದ್ಯಾರ್ಥಿಗಳ ತಪ್ಪುಗಳನ್ನು ಅರಿತು ತಿದ್ದುವವನೇ ನೈಜ ಶಿಕ್ಷಕ. ಸವಾಲುಗಳನ್ನು ಮೀರಿ ಮುನ್ನಡೆಯಲು ಗುರುವಿನ ಬೆಂಬಲ ಬೇಕು ಎಂದು ಮಂಗಳೂರಿನ ಕೆಎಂಸಿ ಮತ್ತು ಕೆಎಸ್ ಹೆಗ್ಡೆ ವೈದ್ಯಕೀಯ ಕಾಲೇಜುಗಳ ನಿಕಟಪೂರ್ವ ಪ್ರೊ. ಡಾ. ಗಣೇಶ್ ಎಸ್. ಪೈ ಹೇಳಿದರು.

ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ತಾಯಿ ಮೊದಲ ಗುರು. ಸಮಯ ಮತ್ತು ಶ್ರಮದ ಮಹತ್ತ್ವವನ್ನು ಅರಿತವರು ಬದುಕಿನಲ್ಲಿ ಯಶಸ್ವಿಯಾಗುತ್ತಾರೆ. ಶಿಕ್ಷಣ ಸಂಸ್ಥೆಯ ಖ್ಯಾತಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪರಿಶ್ರಮವೇ ಕಾರಣ  ಎಂದರು.

ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ಅಧ್ಯಾಪಕ ವೃತ್ತಿ ಆದರ್ಶ ವೃತ್ತಿ. ಸಮರ್ಪಣಾ ಭಾವದಿಂದ ಕರ್ತವ್ಯ ನಿರ್ವಹಿಸುವ ಗುರುಗಳನ್ನು ಯಾವತ್ತು ಮರೆಯಬಾರದು ಎಂದು ತಿಳಿಸಿದರು. 

ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಜಾಸ್ಮಿನ್ ಪ್ರತಿಭಾ ಮತ್ತು ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕ ಅರ್ಜುನ ಎನ್.ಎನ್. ತಮ್ಮ ಅನುಭವಗಳನ್ನು ಹಂಚಿಕೊಂಡರು. 

ಇದೇ ಸಂದರ್ಭದಲ್ಲಿ ಡಾ. ಗಣೇಶ್ ಎಸ್. ಪೈ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂಸ್ಥೆಯ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್, ಎಐಸಿಇ ಸಂಯೋಜಕ ಶ್ಯಾಮ್ ಪ್ರಸಾದ್, ಕೋಚಿಂಗ್ ಮುಖ್ಯಸ್ಥ ಗುರುದತ್ತ ಎನ್., ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕ ಬಾಲಕೃಷ್ಣ ಶೆಟ್ಟಿ, ಗಣಿತ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶಾಂತಲಾ ಕಾಮತ್, ಕಾರ್ಯಕ್ರಮ ನಿರ್ದೇಶಕ ಡಾ. ಗಿರೀಶ್ ಟಿ.ಎನ್. ಉಪಸ್ಥಿತರಿದ್ದರು. 

ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಅಮೀನ್ ಸ್ವಾಗತಿಸಿ, ಕಾರ್ಯದರ್ಶಿ ಎಚ್.ಕೆ. ಭವ್ಯತಾ ವಂದಿಸಿದರು. ಬಳಿಕ ಮನರಂಜನಾ ಕಾರ್ಯಕ್ರಮಗಳು ಜರುಗಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article