
ಡಾ.ಎಂ.ಎನ್.ರಾಜೇಂದ್ರ ಕುಮಾರ್‌ಗೆ "ಮಂಗಳೂರು ರತ್ನ ಪ್ರಶಸ್ತಿ" ಪ್ರದಾನ
ಉಭಯ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಸಹಕಾರಿಯಾಗಿ , ಒಬ್ಬ ದಕ್ಷ ಸಂಘಟನಾ ನೇತರರಾಗಿ, ಸಾಮಾಜಿಕ ಸ್ಪಂದನೆಯ ಮೂಲಕ ಆರ್ಥಿಕ ಹಿಂದುಳಿದವರ ಶಕ್ತಿಯಾಗಿ ರಾಜೇಂದ್ರ ಕುಮಾರ್ ಅವರ ಕಾರ್ಯ ನಿರ್ವಹಣೆ ಎಲ್ಲರಿಗೂ ಮಾದರಿಯಾಗಿದೆ. ಇವರ ಕಾರ್ಯ ಸ್ಪಂದನೆ ಯುವ ಸಮುದಾಯಕ್ಕೆ ಮಾರ್ಗದರ್ಶಕ ಆಗಿರುವುದನ್ನು ಗುರುತಿಸಿ ಮಂಗಳೂರು ರತ್ನ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಕಬಡ್ಡಿ ನಮ್ಮ ರಾಷ್ಟ್ರೀಯ ಕ್ರೀಡೆ ಆಗಿದೆ. ನಮ್ಮ ಯುವ ಸಮುದಾಯವನ್ನು ಕಬಡ್ಡಿ ಒಗ್ಗೂಡಿಸುತ್ತದೆ ಹಾಗೂ ಸೌಹಾರ್ದತೆ ವಾತಾವರಣ ನಿರ್ಮಿಸುತ್ತದೆ.
ವೀ ಆರ್ ಯುನೈಟೆಡ್ ಸಂಸ್ಥೆ ಸತತ ಮೂರು ವರ್ಷಗಳಿಂದ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ನ್ನು ಸಂಘಟಿಸುತ್ತಿದ್ದು ಇದು ಮುಂದಿನ ವರ್ಷ ರಾಜ್ಯ ಮಟ್ಟಕ್ಕೂ ವಿಸ್ತರಣೆಯಾಗಲಿ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಉದ್ಯಮಿ ಜಯಪ್ರಕಾಶ್ ತುಂಬೆ, ವೀ ಆರ್ ಯುನೈಟೆಡ್ ಸಂಸ್ಥೆಯ ಅಧ್ಯಕ್ಷ ಆಜ್ಫರ್ ರಝಕ್, ಉಪಾಧ್ಯಕ್ಷ ಮನೋಜ್ ಕುಮಾರ್, ಕಾರ್ಯದರ್ಶಿ ನಿಶಾನ್ ಭಂಡಾರಿ, ಕೋಶಾಧಿಕಾರಿ ಸುದೇಶ್ ಭಂಡಾರಿ ಇರಾ, ಸಲಹೆಗಾರರಾದ ಶ್ರೀನಿವಾಸ್ ನಾಯಕ್ ಇಂದಾಜೆ, ದೀಪಕ್ ಪಿಲಾರ್, ನಿತಿನ್ ಶೆಟ್ಟಿ, ಸುಜಿತ್ ಭಂಡಾರಿ , ಜಯಂತ್ ಉಪಸ್ಥಿತರಿದ್ದರು.