
ಸೇವೆಗೆ ಸಾವಿಲ್ಲ ಅದು ಚಿರಂಜೀವಿ: ಪ್ರೊ. ದಯಾನಂದ ನಾಯಕ್
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೇವೆ ಮಾಡಲುನಿಸ್ವಾರ್ಥವಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಮೂಲಕ ನಿಸ್ವಾರ್ಥವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಬೇಕು. ವಿದ್ಯಾರ್ಥಿಗಳು ಬಾಹ್ಯವಾಗಿ ಸೆಳೆಯಲ್ಪಡುವ ನಕಾರಾತ್ಮಕತೆಗೆ ಕಡೆಗೆ ಮುಖ ಮಾಡದೇ ಜಾಗರೂಕರಾಗಿ, ಒಗ್ಗಟ್ಟಿನಿಂದ ಕೆಸಲ ಮಾಡಬೇಕಿದೆ. ಮನುಷ್ಯನಿಗೆ ಹಕ್ಕಿಗಳ ಹಾಗೆ ಹಾರಲು ಸಾಧ್ಯವಿಲ್ಲದಿದ್ದರೂ, ಮಾನಸಿಕವಾಗಿ ಹಾರಲು ಸಾಧ್ಯವಿದೆ. ಬದುಕಿನಲ್ಲಿ ಉತ್ತಮ ಗುಣಗಳನ್ನು ಸಾಮಾಜಿಕ ಪರಿಸರದಲ್ಲಿ ಬೆರೆತು ಕಲಿಯಬೇಕಿದೆ. ಸಮಾಜಕ್ಕೆ ಯಾವಾಗಲೂ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೇ ಹೊರತು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ನಿಟ್ಟಿನಲ್ಲಿ ಕೈ ಜೋಡಿಸಬಾರದು. ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಸಮಾಜದಲ್ಲಿರುವ ಅಶಾಂತಿಯನ್ನು ಹೋಗಲಾಡಿಸುವಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಮಾತನಾಡಿ, ನಾಯಕತ್ವ ಎನ್ನುವುದು ಸಮಾಜದಲ್ಲಿ ಹೇಗೆ ಮಾದರಿಯಾಗಿದ್ದೇವೆ ಎನ್ನುವುದನ್ನುನಿರ್ಧರಿಸುತ್ತದೆ. ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಚೈತನ್ಯ ಹೆಚ್ಚಿಸುವುದರ ಜೊತೆಗೆ ಜೀವನದ ಪಾಠವನ್ನು ಹೇಳಿಕೊಡುತ್ತದೆ. ಕೇವಲ ಸಮಾಜವನ್ನು ಸ್ವಚ್ಛ ಮಾಡಿದರೆ ಸಾಲದು, ಅದರ ಜೊತೆಗೆ ನಮ್ಮ ಮನಸ್ಸನ್ನು ಸ್ವಚ್ಛಗಳಿಸುವ ನಿಟ್ಟಿನಲ್ಲಿ ನಮ್ಮ ಆಲೋಚನೆ ನಡೆಸಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿ ಇದೆ. ಆಶಕ್ತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಪರಿಪೂರ್ಣವಾಗಿ ಹಾಗೂ ಮೌಲ್ಯಯುತವಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ಕಿವಿ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ಸುರೇಶ್, ಜಯಶ್ರೀ, ಭವ್ಯ ಸೇರಿದಂತೆ ಇತರೆ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.