ಮಾತಿನ ಚಕಮಕಿ-ಚಾಕುವಿನಿಂದ ಇರಿತ: ಪ್ರಕರಣ ದಾಖಲು
Sunday, September 7, 2025
ಮಂಗಳೂರು: ಬಸ್ಸಿನ ಸೀಟಿನ ವಿಚಾರವಾಗಿ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿ ವ್ಯಕ್ತಿಗೆ ಮತ್ತೊಬ್ಬ ಚೂರಿಯಿಂದ ಇರಿತ ಘಟನೆ ಬಜಾಲ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಸ್ಟೇಟ್‌ಬ್ಯಾಂಕ್‌ನಿಂದ ಬಜಾಲ್ ಜೆ.ಎಂ. ರಸ್ತೆಗೆ ತೆರಳಿದ ಸಿಟಿ ಬಸ್ಸಿನಲ್ಲಿ ಸ್ಥಳೀಯರಾದ ನಾರಾಯಣ ಮತ್ತು ಉತ್ತರ ಭಾರತ ಮೂಲದ ನೀರಜ್ ಎಂಬವರ ನಡುವೆ ಸೀಟಿನ ವಿಚಾರವಾಗಿ ಗಲಾಟೆಯಾಗಿತ್ತು. ಬಸ್ ಇಳಿದ ಬಳಿಕ ನೀರಜ್ ಅಲ್ಲಿಂದ ಹೋಗಿ 5 ನಿಮಿಷದಲ್ಲಿ ವಾಪಾಸ್ ಬಂದು ತನ್ನ ಪ್ಯಾಂಟ್‌ನ ಕಿಸೆಯಲ್ಲಿದ್ದ ಚೂರಿಯಿಂದ ನಾರಾಯಣರ ಪರವಾಗಿ ಮಾತನಾಡಿದ ಜಗದೀಶ್ ಶೆಟ್ಟಿಗೆ ಚೂರಿಯಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ನೀರಜ್ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.