ರುದ್ರಭೂಮಿ ಸ್ವಚ್ಛತಾ ಸೇವೆ
Sunday, September 7, 2025
ಮಂಗಳೂರು: ಹಿಂದೂ ಶವ ಸಂಸ್ಕಾರ ಸೇವಾ ಸಮಿತಿಗೆ ಸಂಬಂಧಪಟ್ಟ ಉಳ್ಳಾಲದ ರುದ್ರ ಭೂಮಿಯಲ್ಲಿರುವ ‘ಶಿವ ಸಾನಿಧ್ಯ’ ಸಹಿತ, ಅಲ್ಲಿನ ಪರಿಸರವನ್ನು ರವಿವಾರದಂದು ಸ್ಥಳೀಯ ಶ್ರೀ ದುರ್ಗಾ ಫ್ರೆಂಡ್ಸ್ (ರಿ) ಉಳ್ಳಾಲ ಇದರ ಸದಸ್ಯರು ಸ್ವಯಂಪ್ರೇರಿತರಾಗಿ ಸ್ವಚ್ಛಗೊಳಿಸಿದರು.
ಈ ಸಂದರ್ಭ ರುದ್ರಭೂಮಿಯ ಉಸ್ತುವಾರಿ ನೋಡುತ್ತಿರುವ ಆರ್.ಕೆ. ಉದಯ ಕುಮಾರ್, ನಿರ್ವಹಣೆ ಮಾಡುತ್ತಿರುವ ಸುಂದರ ಧರ್ಮನಗರ ಉಪಸ್ಥಿತರಿದ್ದು, ಸ್ವಚ್ಚತಾ ಸೇವೆಗೈದ ತಂಡದ ಸದಸ್ಯರನ್ನು ಅಭಿನಂದಿಸಿದರು.