ಕಲ್ಕೂರ ಪ್ರತಿಷ್ಠಾನದಿಂದ ಸೆ.14 ರಂದು ಶ್ರೀ ಕೃಷ್ಣ ವರ್ಣ ವೈಭವ: ಚಿತ್ರ ಕಲಾ ಸ್ಪರ್ಧೆ
ಮಂಗಳೂರು: ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ಸೆ.14 ರಂದು ಕಲ್ಕೂರ ಪ್ರತಿಷ್ಠಾನವು ‘ಶ್ರೀ ಕೃಷ್ಣ ವರ್ಣ ವೈಭವ’ ಚಿತ್ರ ಕಲಾ ಸ್ಪರ್ಧೆ ನಡೆಯಲಿದೆ.
ಅಂದು ಬೆಳಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 1 ರಿಂದ 3ನೇ ತರಗತಿಯ ಮಕ್ಕಳಿಗೆ (ಪುಟಾಣಿ ವಿಭಾಗ) ಪ್ರತಿಷ್ಠಾನದಿಂದ ನೀಡುವ ಶ್ರೀ ಕೃಷ್ಣನ ಚಿತ್ರಕ್ಕೆ ಕ್ರೇಯಾನ್ಸ್/ಸ್ಕೆಚ್ ಪೆನ್ನಿನಿಂದ ಬಣ್ಣ ತುಂಬಿಸುವುದು. 4 ರಿಂದ 5ನೇ ತರಗತಿಯ ಮಕ್ಕಳಿಗೆ (ಶಿಶು ವಿಭಾಗ) ಪ್ರತಿಷ್ಠಾನದಿಂದ ನೀಡುವ ಶ್ರೀ ಕೃಷ್ಣನ ಚಿತ್ರಕ್ಕೆ ಕ್ರೇಯಾನ್ಸ್/ಕಲರ್ ಪೆನ್ಸಿಲ್/ವಾಟರ್ ಕಲರ್ ನಿಂದ ಬಣ್ಣ ತುಂಬಿಸುವುದು. 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳು (ಬಾಲ ವಿಭಾಗ) ಗೋಪಾಲಕೃಷ್ಣನ ಚಿತ್ರವನ್ನು ವಾಟರ್ ಕಲರ್‌ನಿಂದ ರಚಿಸುವುದು. 9 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು (ಕಿಶೋರ ವಿಭಾಗ) ವಾಟರ್ ಕಲರ್/ಪೋಸ್ಟರ್ ಕಲರ್ ಮೂಲಕ ಕಾಳಿಂಗ ಮರ್ಧನ ಕೃಷ್ಣನ ಚಿತ್ರ ರಚಿಸುವುದು. ಹಾಗೂ ಸಾರ್ವಜನಿಕರಿಗಾಗಿ (ಮುಕ್ತ) ಗೋವರ್ಧನ ಗಿರಿಧಾರಿ ಚಿತ್ರವನ್ನು ವಾಟರ್ ಕಲರ್ ನಲ್ಲಿ ರಚಿಸುವ ಸ್ಪರ್ಧೆಯನ್ನು ನಡೆಸಲಾಗುವುದು.
ಸ್ಪರ್ಧಾಳುಗಳಿಗೆ ಡ್ರಾಯಿಂಗ್ ಶೀಟ್‌ಗಳನ್ನು ನೀಡಲಾಗುವುದು. ಸ್ಪರ್ಧಾಳುಗಳು ರ್ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು, ಹೆಚ್ಚಿನ ಮಾಹಿತಿಗಾಗಿ ಸ್ಪರ್ಧೆಯ ಸಂಚಾಲಕ ಜಾನ್ ಚಂದ್ರನ್ (9844284175) ಅವರನ್ನು ಸಂಪರ್ಕಿಸಬಹುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.