ಇರುವೈಲಿನಲ್ಲಿ ಬೃಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನಾಚರಣೆ ಹಾಗೂ ಭಜನಾ ಸಂಕೀರ್ತನೆ
ಸನ್ಮಾನ:
ವರ್ಷಂಪ್ರತಿ ಸಂಘಕ್ಕೆ ಸಹಕರಿಸುತ್ತಿರುವ ಶಿವಾನಂದ ಶಾಂತಿ, ಮಾರಪ್ಪ ಪೂಜಾರಿ, ಚಂದ್ರಹಾಸ ಪೂಜಾರಿ ತ್ಯಾಂಪೊಟ್ಟು, ದೇವರಾಜ್, ಚೆನ್ನಮ್ಮ ಎ ಸಾಲ್ಯಾನ್, ಶಂಕರ್ ಪೂಜಾರಿ ಕಿಟ್ಟುಬೆಟ್ಟು, ಹಾಗೂ ತಿಮ್ಮಪ್ಪ ಪೂಜಾರಿ ಅವರನ್ನು ಗೌರವಿಸಲಾಯಿತು.
ಇರುವೈಲು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ, ಹಾಗೂ ಗುರುಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಇರುವೈಲು ಗ್ರಾಮ ಪಂಚಾಯತ್ ಸದಸ್ಯರಾದ ನವೀನ್ ಪೂಜಾರಿ ಕಿಟ್ಟುಬೆಟ್ಟು, ನಾಗೇಶ್ ಅಮೀನ್ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಕೆಪಿಸಿಸಿ ಸದಸ್ಯ ಪ್ರವೀಣ್ ಪೂಜಾರಿ, ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ,ಕಾರ್ಯದರ್ಶಿ ದಿನೇಶ್ ಕಟ್ಟಣಿಗೆ, ಮಹಿಳಾ ಸಂಘದ ಅಧ್ಯಕ್ಷೆ ದೀಪಾ ದಿನೇಶ್, ಹೊಸಬೆಟ್ಟು ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಪೂಜಾರಿ ಕಾಳೂರು, ಹರೀಶ್ ಕೆ ಸಾಲ್ಯಾನ್ ಗಾಣದಕೊಟ್ಟಿಗೆ, ಪದ್ಮನಾಭ ಪೂಜಾರಿ ಕನಡ್ರಕೋಡಿ, ರಜನೀಕಾಂತ್, ತಿಮ್ಮಪ್ಪ ಪೂಜಾರಿ ಕುತ್ಯಾಡಿ, ಪ್ರಮೀಳಾ ದೇವರಗುಡ್ಡೆ ಹಾಗೂ ಮತ್ತಿತರ ಗಣ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.