ಹೆತ್ತವರನ್ನು ಸಲಹುವಲ್ಲಿ ಐಟಿಐ  ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ: ಕೆ ಅಭಯಚಂದ್ರ ಜೈನ್

ಹೆತ್ತವರನ್ನು ಸಲಹುವಲ್ಲಿ ಐಟಿಐ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ: ಕೆ ಅಭಯಚಂದ್ರ ಜೈನ್


ಮೂಡುಬಿದಿರೆ: ಸಮಾಜದಲ್ಲಿ ಐ.ಟಿ.ಐ ಮುಗಿಸಿದ ವಿದ್ಯಾರ್ಥಿಗಳ ಮೌಲ್ಯ ಗೊತ್ತಿಲ್ಲದೆ ಇರಬಹುದು ಆದರೆ  ಐ.ಟಿ. ಐ ಮುಗಿಸಿದ ವಿದ್ಯಾರ್ಥಿಗಳು  ಕೂಡಲೇ ಕೆಲಸವನ್ನು ಗಿಟ್ಟಿಸಿಕೊಂಡು ತಮ್ಮ ಹೆತ್ತವರನ್ನು ಸಾಕುವಲ್ಲಿ ಮೇಲುಗೈ ಸಾಧಿಸಿದ್ದಾರೆ ಎಂದು ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಹೇಳಿದರು. 

ಅವರು ಏ.ಜಿ. ಸೋನ್ಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ  ಮಂಗಳವಾರ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜಾನ್ಸನ್ ಲಿಫ್ಟ್ಸ್ ಪ್ರೈವೇಟ್ ಲಿಮಿಟೆಡ್ ನ ಶಾಖಾ ಪ್ರಬಂಧಕ ಕುಮಾರ್ ಪ್ರಸಾದ್ ಐತಾಳ್ ವಿದ್ಯಾಥಿ೯ ಸಂಘವನ್ನು ಉದ್ಘಾಟಿಸಿ ಮಾತನಾಡಿ ಐಟಿಐ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಭರವಸೆಯ ಬದುಕಿದೆ, ಇಂದು ಕಾರ್ಖಾನೆಗಳಲ್ಲಿ ಕೌಶಲ್ಯ ಹೊಂದಿರುವ ತಾಂತ್ರಿಕ ತಜ್ಞರ ಕೊರತೆ ಇದ್ದು, ಅವೆಲ್ಲವನ್ನು ನೀಗಿಸುವಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐಟಿಐ ಮುಗಿಸಿರುವ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಖಾನೆಗಳು ಅವರನ್ನು ಅರಸುತ್ತ ಬರುತ್ತಿದ್ದು,  ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾರ್ಜನೆಯನ್ನು ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ,  ಕೆಲಸದ ಬಗ್ಗೆ ಚಿಂತನೆಯನ್ನು ಮಾಡಬೇಡಿ, ನಿಮಗೆ ನೂರಕ್ಕೆ ನೂರು ಪ್ರತಿಶತ ಉದ್ಯೋಗದ  ಅವಕಾಶಗಳು ವಿಫುಲವಾಗಿದೆ ಎಂದು ಹೇಳಿದರು.   

ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, , ಸದಸ್ಯರಾದ  ಅಡ್ವೋಕೇಟ್ ಕೆ.ಆರ್ ಪಂಡಿತ್, ಜಾನ್ ಜೋಸೆಫ್ ಪಿಂಟೋ ಹಾಗೂ ಸಂಸ್ಥೆಯ ಪ್ರಾಂಶುಪಾಲ ಶ್ರೀಕಾಂತ್ ಹೊಳ್ಳ, ವಿದ್ಯಾರ್ಥಿ ಸಂಘದ ಅಧ್ಯಕ್ಷ ರಜತ್, ಉಪಾಧ್ಯಕ್ಷ ಪ್ರಜ್ಞೇಶ್, ಕಾರ್ಯದರ್ಶಿ ಸಚಿನ್ ವೈ ದೇವಾಡಿಗ, 

ಕ್ರೀಡಾ ಕಾರ್ಯದರ್ಶಿ ಪರೀಕ್ಷಿತ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಸಾದ್  ವೇದಿಕೆಯಲ್ಲಿ ಉಪಸ್ಥಿತರಿದ್ದರು. ತರಬೇತಿ ಅಧಿಕಾರಿ ಶಿವಪ್ರಸಾದ್ ಹೆಗ್ಡೆ ಕಾಯ೯ಕ್ರಮ ನಿರೂಪಿಸಿದರು. ಪ್ರಜ್ಞೇಶ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article