ಕಿನ್ನಿಗೋಳಿಯಲ್ಲಿ ದಶಮ ವರ್ಷದ ಶಾರದೆಯ ಪ್ರತಿಷ್ಟೆ

ಕಿನ್ನಿಗೋಳಿಯಲ್ಲಿ ದಶಮ ವರ್ಷದ ಶಾರದೆಯ ಪ್ರತಿಷ್ಟೆ


ಕಿನ್ನಿಗೋಳಿ: ಇಲ್ಲಿನ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಮಹಾಮ್ಮಾಯಿ ಕಟ್ಟೆಯ ಬಳಿ ಸಂಘಟಿಸುವ ಹತ್ತನೆಯ ವರುಷದ ಶ್ರೀ ಶಾರದಾ ಮಹೋತ್ಸವ ಸೋಮವಾರ ಶಾರದೆಯ ಪ್ರತಿಷ್ಟಾಪನೆಯೊಂದಿಗೆ ಆರಂಭಗೊಂಡಿತು.

ಬೆಳಗ್ಗೆ ಕಿನ್ನಿಗೋಳಿ ಪೇಟೆಯಲ್ಲಿ ಶಾರದಾ ಮೂರ್ತಿಯ ಪುರಮೆರವಣಿಗೆ ನಡೆದು, ವಿಗ್ರಹ ಪ್ರತಿಷ್ಟೆಯ ಬಳಿಕ ಮಹಾಪೂಜೆ ನಡೆಯಿತು. 

ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ, ಜಿಎಸ್‌ಬಿ ಸಮಾಜದ ರಾಜೇಶ್ ನಾಯಕ್, ದಯಾನಂದ ಶೆಟ್ಟಿ, ರಾಜೇಶ್ ಕುಂದರ್, ಕೃಷ್ಣ ಶೆಣೈ ಶ್ರೀನಿವಾಸ ಶೆಣೈ, ಪ್ರಕಾಶ್ ಆಚಾರ್, ಧನಂಜಯ ಶೆಟ್ಟಿಗಾರ್, ಸ್ವರಾಜ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಪ್ರತಾಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಂಸದ ಬ್ರಿಜೇಶ್ ಚೌಟ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಬಿಲ್ವಕಲಾ ಶಾಳೆಯವರಿಂದ ಭರತನಾಟ್ಯ, ತರುಣಶಕ್ತಿ ವೃಂದದವರಿಂದ ನಾಟಕ, ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article