
ಡಾ.ವಿನಯ್ ಕುಮಾರ್ ಹೆಗ್ಡೆ ಅವರಿಗೆ ಸಿರಿಪುರ ಪ್ರಶಸ್ತಿ
Sunday, September 21, 2025
ಮೂಡುಬಿದಿರೆ: ದಂತ ವೈದ್ಯ ಡಾ. ವಿನಯ್ ಕುಮಾರ್ ಹೆಗ್ಡೆ ಅವರನ್ನು 2025 ಸಾಲಿನ ಸಿರಿಪುರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಮಕೃಷ್ಣ ಶಿರೂರು ತಿಳಿಸಿದ್ದಾರೆ.
ಪೊನ್ನೇಚಾರಿ ಶ್ರೀ ವೆಂಕಟರಮಣ ದೇವಾಲಯದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸೆ.30 ರಂದು ನಡೆಯುವ ನಡೆಯುವ ಶಾರದೋತ್ಸವ ಮೂಡುಬಿದಿರೆ ದಸರಾ 2025 ಸಮಾರೋಪ ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತದೆ.
ಮೂಡುಬಿದಿರೆಯಲ್ಲಿ ಕಳೆದ ಐದು ದಶಕದಿಂದ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಡಾ. ಹೆಗ್ಡೆ ಅವರ ಸೇವೆ ಅನನ್ಯವಾದುದು. ಸರಳ ಸಜ್ಜನಿಕೆಯು ವ್ಯಕ್ತಿತ್ವವನ್ನು ಹೊಂದಿರುವ ಡಾ. ವಿನಯಕುಮಾರ್ ಹೆಗ್ಡೆ ಅವರು ಮೂಡುಬಿದಿರೆಯ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಹಿರಿಯ ಸದಸ್ಯರಾಗಿದ್ದು, ಕಳೆದು 50 ವರ್ಷಗಳಿಂದ ರೋಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಸಿರಿಪುರ ಪ್ರಶಸ್ತಿ 2025 ನೀಡಿ ಗೌರವಿಸಲಾಗುತ್ತಿದೆ. ಮೂಡುಬಿದಿರೆ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕಾಮತ್ ಅಭಿನಂದಿಸಿದ್ದಾರೆ.