
ಬನ್ನಡ್ಕದಲ್ಲಿ ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಚಾಲನೆ
Sunday, September 21, 2025
ಮೂಡುಬಿದಿರೆ: ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಕ ಇದರ 4ನೇ ವಷ೯ದ ಶಾರದೋತ್ಸವದಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಲಂಗಾರು ಶ್ರೀಮಹಾಲಿಂಗೇಶ್ವರ ದೇವಳದ ಅರ್ಚಕ ಸುಬ್ರಹ್ಮಣ್ಯ ಭಟ್ ಅವರು ಭಾನುವಾರ ಉದ್ಘಾಟಿಸಿದರು.
ಬನ್ನಡ್ಕ ಶ್ರೀ ಶಾರದೋತ್ಸವ ಟ್ರಸ್ಟ್ ನ ಅಧ್ಯಕ್ಷ ದಯಾನಂದ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಮೂಡುಬಿದಿರೆ ಪರಿಸರದ ಸುಮಾರು 400ಕ್ಕೂ ಅಧಿಕ ಮಕ್ಕಳು ಸ್ಪಧೆ೯ಯಲ್ಲಿ ಭಾಗವಹಿಸಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಬೆಳುವಾಯಿ ಗ್ರಾಪಂ ಸದಸ್ಯ ಭರತ್ ಶೆಟ್ಟಿ, ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ಯಾಮ್ ಪ್ರಸಾದ್, ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆಯ ಅಧ್ಯಕ್ಷ ಗುರು, ಪ್ರಮುಖರಾದ ಸತೀಶ್ ಭಟ್, ಸಂಧ್ಯಾ ಸಂದೀಪ್, ಪ್ರೀಕ್ಷಾ ,ನಿತಿನ್, ಶಾರದೋತ್ಸವದ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡು, ಕೋಶಾಧಿಕಾರಿ ಸಂತೋಷ್ ನಾಯಕ್, ಸಾಂಸ್ಕೃತಿಕ ಉತ್ಸವದ ಸಂಚಾಲಕರಾದ ಮಹೇಶ್ ಹುಲೇಕಲ್, ಸುಕುಮಾರ್ ಬನ್ನಡ್ಕ ಉಪಸ್ಥಿತರಿದ್ದರು.
ಪ್ರಸನ್ನ ಶೆಟ್ಟಿ ಕಾಯ೯ಕ್ರಮ ನಿರೂಪಿಸಿದರು.