ವಾಲ್ಪಾಡಿ: ಮಿಲಾದ್ ಸಂಭ್ರಮ
Saturday, September 6, 2025
ಮೂಡುಬಿದಿರೆ: ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ಸಂಭ್ರಮದಿಂದ ಈದ್ ಮಿಲಾದ್ ಆಚರಿಸಲಾಯಿತು.
ಬೆಳಗ್ಗೆ ಮಕ್ಕಿ ಮಸೀದಿಯಿಂದ ವಾಲ್ಪಾಡಿ ಮಸೀದಿವರೆಗೆ ಮಿಲಾದ್ ರ್ಯಾಲಿ ನಡೆಸಲಾಯಿತು. ಮಕ್ಕಿ ಮದರಸ ವಿದ್ಯಾರ್ಥಿಗಳ ದಫ್,ವಾಲ್ಪಾಡಿ ಮದರಸ ಸಣ್ಣ ಮಕ್ಕಳ ಮಿಲಾದ್ ಸ್ವಾಗತ ನೃತ್ಯ,ವಾಲ್ಪಾಡಿ ಯುವಕರ ಆಕರ್ಷಕ ನೇರಳೆ ಬಣ್ಣದ ಲುಂಗಿ,ಬಿಳಿ ಅಂಗಿಯ ಸಮವಸ್ತ್ರ ರ್ಯಾಲಿಯಲ್ಲಿ ಗಮನಸೆಳೆಯಿತು.
ವಾಲ್ಪಾಡಿ ಮಸೀದಿ ಕಮಿಟಿ ಅಧ್ಯಕ್ಷ ಶರೀಫ್ ಎಂ.ಎಂ, ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು, ಕಾರ್ಯದರ್ಶಿ ಝಕರಿಯಾ ಯೂಸುಫ್,ವಾಲ್ಪಾಡಿ ಖತೀಬರಾದ ಅಬ್ಬಾಸ್ ಫೈಝಿ, ಸದರ್ ಅಬ್ದುಲ್ ಹಕೀಮ್ ಅಶ್ರಫಿ,ಮಕ್ಕಿ ಮಸೀದಿ ಖತೀಬರಾದ ಸಿರಾಜುದ್ದೀನ್ ಫೈಝಿ,ಮುಅಝ್ಝಿನ್ ಗಳಾದ ಹನೀಫ್ ಮುಸ್ಲಿಯಾರ್, ಹಮೀದ್ ಮುಸ್ಲಿಯಾರ್ ಮತ್ತಿತರರು ಈ ಸಂಭ್ರಮದಲ್ಲಿ ಪಾಲ್ಗೊಂಡರು.