
ಮೂಡುಬಿದಿರೆ ಎಕ್ಸಲೆಂಟ್ ನಲ್ಲಿ ಸರ್ವಧರ್ಮ ಅರಿವು ಸಮ್ಮೇಳನ
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜೀ ಅವರು ಸಮ್ಮೇಳವನ್ನು ಉದ್ಘಾಟಿಸಿ ಆಶೀವ೯ನ ನೀಡಿ, ಮಾನವ ಮಾನವನಾಗುವುದೇ ಜೀವನದ ಮುಖ್ಯ ಉದ್ದೇಶ ಆಗಬೇಕು. ಮಾನವ ಜಗಳದಲ್ಲಿ ಮುಳುಗುವಂತಾಗಿದೆ. ಮನುಷ್ಯತ್ವ ಇನ್ನಷ್ಟು ಬೆಳಗಬೇಕಾಗಿದೆ. ಧರ್ಮ ಧರ್ಮಗಳು ಅನುಯಾಯಿಗಳಲ್ಲಿ ಮಾನವತ್ವದ ಸಂಕೇತ, ಪ್ರೀತಿಯ ಗುಣ ಬೆಳೆಸಬೇಕಾಗಿದೆ ಎಂದರು.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಒಳ್ಳೆಯದನ್ನು ಎತ್ತಿ ಹಿಡಿಯುವುದೇ ಧರ್ಮ. ಧಾರ್ಮಿಕತೆಯನ್ನು ನಮ್ಮಲ್ಲಿ ಅಳವಡಿಸಿಕೊಂಡು ಪ್ರತೀ ಧರ್ಮವನ್ನು ಪ್ರೀತಿಸೋಣ ಎಂದರು.
ಅಲಂಗಾರ್ ಚರ್ಚ್ ಧರ್ಮಗುರು ಫಾ. ಮೆಲ್ವಿನ್ ನೊರೋನಾ ಕ್ರೈಸ್ತ ಧರ್ಮದ ಕುರಿತು ಮಾತನಾಡಿ ಪ್ರೀತಿ ಸೌಹಾರ್ದತೆ ಸೇವೆಯನ್ನೇ ಬಯಸುತ್ತಿದೆ ಈ ಮಾನವ ಜನ್ಮ ಎಂದರು.
ಮಂಗಳೂರು ಮಗ್ನವೀ ಅಕಾಡೆಮಿ ಅಧ್ಯಕ್ಷರು, ಡಾ. ಅಬ್ದುಲ್ ರಶೀದ್ ಝನೀ ಸಖಾಫಿ ಮುಸ್ಲಿಂ ಧರ್ಮ ಕುರಿತು ಮಾತನಾಡಿ ಶಾಂತಿ ಪ್ರೀತಿಯೊಂದಿಗೆ ಮಾನವತ್ವ ಬೆಳೆಸುವುದೇ ಇಸ್ಲಾಂ. ಎಲ್ಲರೂ ನಮ್ಮವರು ಎನ್ನುವುದು ಈ ಧರ್ಮ ಎಂದರು.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸರ್ವ ಧರ್ಮ ಗಳ ಸಮನ್ವಯತೆ ಅಗತ್ಯತೆಯನ್ನು ತಿಳಿಸಿ ಪೀಠಿಕೆಯ ನುಡಿಗಳನ್ನು ನೀಡಿದರು.
ಮೂಡುಬಿದಿರೆ ಎಸ್.ಏನ್. ಎಮ್. ಪೊಲಿಟಿಕ್ನಿಕ್, ಉಪನ್ಯಾಸಕ ಡಾ. ಎಸ್. ಪಿ. ಗುರುದಾಸ್ ಹಿಂದೂ ಧರ್ಮದ ಕುರಿತು ಮಾತನಾಡಿ ಧರ್ಮ ಧರ್ಮಗಳ ನಡುವೆ ಗೋಡೆ ನಿರ್ಮಾಣ ಆಗಬಾರದು. ಪ್ರಪಂಚದ ನಿಯಮವೇ ಧರ್ಮ. ಮುಂದಿನ ಜನಾಂಗ ಸತ್ಪ್ರೀತಿಯಿಂದ ಬದುಕಲು ಈ ಪ್ರಕ್ರಿಯೆ ಅವಶ್ಯಕ ಎಂದರು.
ಎಕ್ಸಲೆಂಟ್ ಸಂಸ್ಥೆಯ ಅಡಳಿತ ನಿರ್ದೇಶಕ ಡಾ. ಬಿ. ಪಿ. ಸಂಪತ್ ಕುಮಾರ್, ಪ್ರಾಂಶು ಪ್ರದೀಪ್ ಕುಮಾರ್ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ವೇದಿಕೆಯಲ್ಲಿದ್ದರು.