
ಕಲ್ಲಬೆಟ್ಟುವಿನ ನಮ್ಮ ಕ್ಲಿನಿಕ್ ನಲ್ಲಿ ಆರೋಗ್ಯ ಸಮಿತಿ ಸಭೆ
Saturday, September 20, 2025
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಗ್ರಾಮದ ನಮ್ಮ ಕ್ಲಿನಿಕ್‌ನಲ್ಲಿ ಜನ ಆರೋಗ್ಯ ಸಮಿತಿಯ ಸಭೆಯು ಶನಿವಾರ ನಡೆಯಿತು.
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಕ್ಷತಾ ಮತ್ತು ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ.ಕಿರಣ್ ಆಲ್ಬರ್ಟ್ ಲೋಬೊ ಕ್ಲಿನಿಕ್‌ನ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ, ಕಲ್ಲಬೆಟ್ಟು ಪುರಸಭಾ ಸದಸ್ಯರಾದ ಜೋಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್, ನ್ಯಾಯವಾದಿ ಎಂ.ಬಾಹುಬಲಿ ಪ್ರಸಾದ್, ಸ್ಥಳೀಯ ಪ್ರಮುಖರಾದ ಉದ್ಯಮಿ ಶ್ರೀಪತಿ ಭಟ್, ಪದ್ಮಯ್ಯ ಬಿ ಸುವರ್ಣ, ಕಲ್ಲಬೆಟ್ಟು ಶಾಲಾ ಶಿಕ್ಷಕಿ ವಿನ್ನಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಂದರ, ಶಾರದಾ ದೇವಿ, ಅಂಗನವಾಡಿ ಶಿಕ್ಷಕಿ ಶಕುಂತಲಾ, ಉಪಸ್ಥಿತರಿದ್ದರು.
ಸಭೆಯಲ್ಲಿ ನಮ್ಮ ಕ್ಲಿನಿಕ್ ಕಟ್ಟಡಕ್ಕೆ ಸರಕಾರಿ ಸ್ಥಳವನ್ನು ಗುರುತಿಸುವಂತೆ ಮತ್ತು ಕಾಯಂ ವೈದ್ಯಾಧಿಕಾರಿ ನೇಮಕ ಮಾಡುವಂತೆ ನಿರ್ಣಯಿಸಲಾಯಿತು. ಯೋಗ ತರಬೇತಿಗೆ ಸ್ಥಳೀಯರ ಸಹಾಯದಿಂದ ಕಟ್ಟಡವನ್ನು ಗುರುತಿಸಲು ಸ್ಥಳೀಯರ ಸಹಕಾರ ಕೋರುವುದಾಗಿ ನಿರ್ಣಯಿಸಲಾಯಿತು.