
ನವ ಸಮಾಜದ ನಿಮಾ೯ಣಕ್ಕೆ ಶಿಕ್ಷಕರು ಸನ್ನದ್ಧರಾಗಿ: ಮಾಹೆ ಉಪಕುಲಪತಿ ಡಾ.ಡಿ.ಎಂ. ವೆಂಕಟೇಶ್
ಅವರು ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಬುಧವಾರ ನಡೆದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ವ್ಯಾಪ್ತಿಯ ಶಿಕ್ಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ವ್ಯಕ್ತಿಯು ಶಕ್ತಿಯುತವಾಗಿ ಬೆಳೆಯಲು ಶಿಕ್ಷಣ ಪೂರಕವಾಗುವಂತೆ ವಿದ್ಯಾ ಕ್ಷೇತ್ರವನ್ನು ಬೆಳೆಸುವಂತೆ ಸಲಹೆಯಿತ್ತರು.
ಎಸ್.ಎಂ.ಸಿ. ವಿಶ್ವಸ್ಥ ಮಂಡಳಿ ಅಧ್ಯಕ್ಷ ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ದೊರೆತ ವ್ಯಕ್ತಿ ಸಮಾಜದಲ್ಲಿ ಸಾಧನಾಶೀಲನಾಗಿ ಬೆಳೆಯುತ್ತಿದ್ದಾರೆ ಎಂದರು.
ಏ.ಜಿ.ಈ ಆಡಳಿತಾಧಿಕಾರಿ ಡಾ ಶ್ರೀಧರ ಆರ್ ಪೈ ಪ್ರಸ್ತಾವಿಕವಾಗಿ ಮಾತನಾಡಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಹುಟ್ಟು ಬೆಳವಣಿಗೆಯನ್ನು ತಿಳಿಸಿದರು.
ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಎಸ್. ಡಿ ಸಂಪತ್ ಸಾಮ್ರಾಜ್ಯ, ಪಿಯು ಪ್ರಾಂಶುಪಾಲರಾದ ವಿಜಯಲಕ್ಷ್ಮಿ ವೇದಿಕೆಯಲ್ಲಿದ್ದರು.
ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಚೈತ್ರ ಸಿ ಕಾರ್ಯಕ್ರಮ ನಿರೂಪಿಸಿದರು ವಿಜಯಲಕ್ಷ್ಮಿ ವಂದಿಸಿದರು.
ನಂತರ ಡಾ. ಅಂಕಿತ ಶೆಟ್ಟಿ. ಡಾ. ಅಭಿಲಾಶ್ ಕೆ ಪೈ, ಡಾ. ಸತೀಶ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.