ಹೆಗ್ಗಡೆ ಅವರು ತನ್ನ ಸ್ವಂತ ಬದುಕನ್ನು ಜನರ ಏಳಿಗೆಗೆ ಮೀಸಲಿಟ್ಟವರು: ಮೂಡುಬಿದಿರೆ ಶ್ರೀ

ಹೆಗ್ಗಡೆ ಅವರು ತನ್ನ ಸ್ವಂತ ಬದುಕನ್ನು ಜನರ ಏಳಿಗೆಗೆ ಮೀಸಲಿಟ್ಟವರು: ಮೂಡುಬಿದಿರೆ ಶ್ರೀ

ಮೂಡುಬಿದಿರೆಯಲ್ಲಿ ಸಮಾನ ಮನಸ್ಕರ ಜನಾಗ್ರಹ ಸಭೆ


ಮೂಡುಬಿದಿರೆ: ಸಮಾಜದಲ್ಲಿ ಸ್ವಂತ ಬದುಕನ್ನು ಜನರ ಏಳಿಗೆಗಾಗಿ ಮೀಸಲಿಟ್ಟರುವ ಧರ್ಮಸ್ಥಳದ ಹೆಗ್ಗಡೆಯವರು ಎಲ್ಲರಿಗೂ  ಮಾದರಿಯಾಗುವರು. ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಹೆಗ್ಗಡೆ ಮನೆತನದಿಂದ ಕರಾವಳಿ ಮಲೆನಾಡಿಗೆ ಉತ್ತಮ ಸಂಬಂಧ ಬೆಳೆದು ಬಂದಿದೆ. ಇಂದು ಧರ್ಮಸ್ಥಳಕ್ಕೆ ಬಂದ ಅಪಾಯ ಮುಂದಿನ ದಿನಗಳಲ್ಲಿ ಗ್ರಾಮದ ಧಾರ್ಮಿಕ ಕೇಂದ್ರ, ಬೀಡುಗಳಿಗೂ ಬರಬಹುದು ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾಯ೯ವಯ೯ ಸ್ವಾಮೀಜಿ ನುಡಿದರು. 

ಅವರು ಶ್ರೀ ಕ್ಷೇತ್ರ ಧಮ೯ಸ್ಥಳ ಮತ್ತು ಹೆಗ್ಗಡೆ ಅವರ ಮೇಲಿನ ಸುಳ್ಳು ಆರೋಪಗಳನ್ನು ಖಂಡಿಸಿ ಸತ್ಯವು ಆದಷ್ಟು ಶೀಘ್ರವಾಗಿ ಬಹಿರಂಗಗೊಳ್ಳಲಿ ಎಂದು ಆಗ್ರಹಿಸಿ ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಮೂಡುಬಿದಿರೆ ವತಿಯಿಂದ ಸ್ಕೌಟ್ &ಗೈಡ್ಸ್ ಕನ್ನಡ ಭವನದಲ್ಲಿ ಶನಿವಾರ ನಡೆದ ಸಮಾನ ಮನಸ್ಕರ ಜನಾಗ್ರಹ ಸಮಾವೇಶದಲ್ಲಿ ಆಶೀವ೯ಚನ ನೀಡಿದರು.


ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರಿದ್ದಾನೆ ಎಂಬುದನ್ನು ನಂಬಿರುವುದರಿಂದಲೇ ಶ್ರದ್ಧಾಕೇಂದ್ರಗಳಿರುವುದು. ಎಲ್ಲಾ ಧಮ೯ಗಳಿಗೂ ಸವಲತ್ತುಗಳನ್ನು ನೀಡುವ ವ್ಯಕ್ತಿಯಿದ್ದರೆ ಅದು ಹೆಗ್ಗಡೆಯವರು. ಇಂದು ಕಮ್ಯುನಿಸ್ಟ್ ಮನಸ್ಥಿತಿ ಹೊಂದಿರುವವರು ಶ್ರದ್ಧಾಕೇಂದ್ರಗಳನ್ನು, ಧಾಮಿ೯ಕ ಮನೋಭಾವವನ್ನು ಕೆಡಿಸುವ ಕೆಲಸ ನಡೆಯುತ್ತಿರುವುದು ವಿಷಾಧನೀಯ. ಸೌಜನ್ಯ ಪ್ರಕರಣಕ್ಕೂ ನ್ಯಾಯ ಸಿಗಬೇಕು ಆದರೆ ತಪ್ಪಿಸ್ಥರಲ್ಲವರ ಮೇಲೆ ಆರೋಪಗಳು ಬರಬಾರದೆಂದ ಅವರು ಮೂಡುಬಿದಿರೆಯ ಜನತೆ ಹೆಗ್ಗಡೆ ಅವರ ಬೆಂಬಲ ನಿಮ ಬೆಂಬಲಕ್ಕೆ ಸದಾ ಇದೆ ಎಂದು ಹೇಳಿದರು.

ಲೇಖಕ, ಖ್ಯಾತ ವಾಗ್ಮಿ ಮುನಿರಾಜ ರೆಂಜಾಳ ದಿಕ್ಸೂಚಿ ಭಾಷಣ ಮಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆಯವರಿಂದ ಶಿಕ್ಷಣ, ಆರೋಗ್ಯ, ಸ್ವಸಹಾಯ, ಮದ್ಯವರ್ಜನ ಶಿಬಿರ, ಸಿರಿಧಾನ್ಯ ಸಂಸ್ಕರಣೆ, ಗ್ರಾಮಾಭಿವೃದ್ಧಿ ಯೋಜನೆ, ಲಕ್ಷಾಂತರ ಉದ್ಯೋಗ ಸೃಷ್ಟಿ, ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ, ಗೌರವ ಶಿಕ್ಷಕ, ಶುದ್ದಗಂಗಾ ಯೋಜನೆ, ಹಿಂದೂ ರುದ್ರ ಭೂಮಿ ಅಭಿವೃದ್ಧಿ, ಭಜನಾ ಕಮ್ಮಟ, ದೇವಾಲಯಗಳ ಪುನರುವೃದ್ಡಿ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳು, ಹಲವಾರು ಸಮ್ಮೇಳನಗಳು ನಡೆದಿವೆ. ಹೆಗ್ಗಡೆಯವರು, ಅವರ ಮನೆಯವರು, ದೇವಸ್ಥಾನಕ್ಕೂ ಬುರುಡೆ ಪ್ರಕರಣಗಳಿಗೂ ಏನು ಸಂಬಂಧ ಎಂಬುದನ್ನು ಸ್ಪಷ್ಟ ಪಡಿಸಬೇಕಾಗಿದೆ. ಅವರ ಸ್ಥಿತ ಪ್ರಜ್ಞೆಯ ಮನಸ್ಥಿತಿ ಸಮಾಜ ಮುಖಿ ಪ್ರಗತಿ ಕಾರ್ಯಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕನಾ೯ಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾಯ೯ದಶಿ೯ ಮಿಥುನ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ., ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯ ಕೊರಗಪ್ಪ, ಬಿಜೆಪಿ ಮುಖಂಡರಾದ ಸುದರ್ಶನ್ ಎಂ., ಕೆ.ಪಿ. ಜಗದೀಶ್ ಅಧಿಕಾರಿ, ಕೃಷ್ಣರಾಜ ಹೆಗ್ಡೆ, ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಉದ್ಯಮಿ ಕೆ.ಶ್ರೀಪತಿ ಭಟ್, ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ಆದರ್ಶ್ ಅರಮನೆ, ಪ್ರಮುಖರಾದ ಕೃಷ್ಣರಾಜ ಹೆಗ್ಡೆ, ಶ್ವೇತಾ ಜೈನ್, ಶಶಿಧರ್ ನಾಯಕ್, ಅಂಡಾರು ಗುಣಪಾಲ ಹೆಗ್ಡೆ, ಧನಕೀರ್ತಿ ಬಲಿಪ, ವಾಸುದೇವ ನಾಯಕ್, ಸಂಪತ್ ಸಾಮ್ರಾಜ್ಯ, ರಾಜವರ್ಮ ಬೈಲಂಗಡಿ, ಬೆಳುವಾಯಿ ಸೀತಾರಾಮ ಆಚಾರ್ಯ, ಧರಣೇಂದ್ರ ಕುಮಾರ್, ಅಮರ್‌ಕೋಟೆ, ಸುಭಾಶ್ಚಂದ್ರ ಚೌಟ ಮತ್ತಿತರರಿದ್ದರು. 

ಅಂಡಾರು ಗುಣಪಾಲ ಹೆಗ್ಡೆ ಆಳ್ವಾಸ್‌ನ ಕನ್ನಡ ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article