ಪಾಶ್ಚಿಮಾತ್ಯರ ವಿರುದ್ಧ ಪ್ರಪ್ರಥಮವಾಗಿ ಧ್ವನಿ ಎತ್ತಿದ ತುಳುನಾಡಿನ ವೀರ ಮಹಿಳೆ ಸ್ವಾಭಿಮಾನಿ ಉಳ್ಳಾಲದ ರಾಣಿ ಅಬ್ಬಕ್ಕ

ಪಾಶ್ಚಿಮಾತ್ಯರ ವಿರುದ್ಧ ಪ್ರಪ್ರಥಮವಾಗಿ ಧ್ವನಿ ಎತ್ತಿದ ತುಳುನಾಡಿನ ವೀರ ಮಹಿಳೆ ಸ್ವಾಭಿಮಾನಿ ಉಳ್ಳಾಲದ ರಾಣಿ ಅಬ್ಬಕ್ಕ


ಪಡುಬಿದ್ರಿ: ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯೂರೋಪಿಯನ್ನರಲ್ಲಿ ಪೋರ್ಚುಗೀಸರು ಮೊದಲನೆಯವರಾಗಿದ್ದು, ವ್ಯಾಪಾರದ ಜೊತೆಯಲ್ಲಿ ದಬ್ಬಾಳಿಕೆಗೆ ಮುಂದಾದ ಪೋರ್ಚುಗೀಸರ ವಿರುದ್ಧ ಸುಮಾರು ನಾಲ್ನೂರ ಐವತ್ತು ವರ್ಷಗಳ ಹಿಂದೆಯೇ ಧ್ವನಿ ಎತ್ತಿದ ತುಳುನಾಡಿದ ವೀರ ಮಹಿಳೆ ಸ್ವಾಭಿಮಾನಿ ಉಳ್ಳಾಲದ ರಾಣಿ ಅಬ್ಬಕ್ಕ ಎಂದು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಹೇಳಿದರು.

ಅವರು ಮಂಗಳವಾರ ಕರ್ನಾಟಕ ಮಹಾ ವಿದ್ಯಾಲಯ ಶಿಕ್ಷಕ ಸಂಘ(ರಿ) ಮಂಗಳೂರು ವಿಭಾಗ ಮತ್ತು ಸರಕಾರಿ ಪ.ಪೂ. ಕಾಲೇಜು ಪಲಿಮಾರು ಇವರ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ‘ಅಬ್ಬಕ್ಕರವರ 500ನೇ ಜಯಂತಿಯ ಪ್ರಯುಕ್ತ ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ-ಎಸಳು 72, ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಒಬ್ಬ ಮಹಿಳೆ ಪರಕೀಯ ಶಕ್ತಿಯ ವಿರುದ್ಧ ರಾಜತಾಂತ್ರಿಕವಾಗಿ ತನ್ನ ಸೀಮಿತ ಸೈನ್ಯ ಶಕ್ತಿಯಿಂದ ಸ್ವಾಭಿಮಾನಿಯಾಗಿ ಸವಾಲು ಹಾಕುವ ದಿಟ್ಟತನ ಹಾಗೂ ಶೌರ್ಯ, ನಾಯಕತ್ವ, ಸತ್ಯ, ನಿಷ್ಠೆ ಪ್ರಾಮಾಣಿಕತೆ ಆದರ್ಶಪ್ರಾಯವಾಗಿದೆ. ಚೌಟ ಮನೆತನದ ರಾಣಿ ಅಬ್ಬಕ್ಕರ ಆದರ್ಶವನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳು ಪರರಿಗೆ ಉಪಕಾರವಾಗುವಂತೆ ಬದುಕಿ ಸಮಾಜದ ಅಸ್ತಿಗಳಾಗಿ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಸಾದ್ ಪಲಿಮಾರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಅಬ್ಬಕ್ಕರಂತಹ ವೀರಧೀರ ಮಹಿಳೆಯರು ತೋರಿದ ಧೈರ್ಯ ಮತ್ತು ಸಾಹಸವನ್ನು ಪ್ರಶಂಸಿಸಿದರು. 

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಮಾತನಾಡಿ ಸಂಪದ್ಭರಿತ ಭಾರತವನ್ನು ಯುವಜನತೆ ವ್ಯಕ್ತಿಗಿಂತ ದೇಶ ಮುಖ್ಯ ಎಂಬ ಧ್ಯೇಯದಡಿ ಒಗ್ಗಟ್ಟಾಗಿ ಬದುಕಿ ಸಮಾಜದ ಒಳಿತಿಗಾಗಿ ದುಡಿಯುವಂತೆ ತಿಳಿಸಿದರು.

ಕಾರ್ಯಕ್ರಮ ಸಂಯೋಜಕ ಯಶವಂತ ಕುದ್ರೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಉಪನ್ಯಾಸಕಿ ಶುಭಲಕ್ಷ್ಮಿ ಆರ್. ನಾಯಕ್ ಸ್ವಾಗತಿಸಿ, ಉಪನ್ಯಾಸಕಿ ಚೈತ್ರಾ ವಂದಿಸಿದರು. ಉಪನ್ಯಾಸಕಿ ಸ್ವಾತಿ ಪ್ರಭು ನಿರೂಪಿಸಿದರು. 

ಉಪನ್ಯಾಸರುಗಳಾದ ನವಿತಾ, ಸುಶ್ಮಿತಾ, ವಿಕ್ರಮ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article