ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟ: ಸಂತ ಅಲೋಶಿಯಸ್ ಕಾಲೇಜ್ ಅವಳಿ ಚಾಂಪಿಯನ್ಸ್

ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟ: ಸಂತ ಅಲೋಶಿಯಸ್ ಕಾಲೇಜ್ ಅವಳಿ ಚಾಂಪಿಯನ್ಸ್


ಸುಬ್ರಹ್ಮಣ್ಯ: ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯದ ಆಶ್ರಯದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಸಂತ ಅಲೋಷಿಯಸ್ ಕಾಲೇಜಿನ ತಂಡವನ್ನು ಹೊಂದಿದ ಮಂಗಳೂರು ತಾಲೂಕು ತಂಡವು ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಅವಳಿ ತಂಡಗಳು ಚಾಂಪಿಯನ್ ಪುರಸ್ಕಾರ ಪಡೆಯಿತು.

ಜಿದ್ದಾಜಿದ್ದಿನ ಅಂತಿಮ ಹಣಾಹಣಿ:

ಜಿದ್ದಾಜಿದ್ದಿನಿಂದ ಕೂಡಿದ ಬಾಲಕರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಪುತ್ತೂರು ತಾಲೂಕು ತಂಡವು 25-17, 25-19 ಅಂಕಗಳಿಂದ ಪರಾಜಯಗೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಬಾಲಕಿಯರ ವಿಭಾಗದ ಪೈನಲ್‌ನಲ್ಲಿ ಸುಳ್ಯ ತಂಡವು 25-8, 25-16 ಅಂಕಗಳಿಂದ ಸೋತು ದ್ವಿತೀಯ ಸ್ಥಾನ ಪಡೆಯಿತು.


ಸೆಮಿ ಪೈನಲ್:

ಬಾಲಕರ ವಿಭಾಗದಲ್ಲಿ ಮಂಗಳೂರು ತಂಡವು ಬಂಟ್ವಾಳ ತಂಡವನ್ನು 25-21, 25-12೨ ಸೋಲಿಸಿ ಪೈನಲ್ ಪ್ರವೇಶಿಸಿತು. ಪುತ್ತೂರು ತಂಡವು 25-12, 25-16 ಸೋಲಿಸಿ ಪೈನಲ್ ಪ್ರವೇಶಿಸಿತು. ಬಾಲಕಿಯರ ವಿಭಾಗದಲ್ಲಿ ಮಂಗಳೂರು ತಂಡವು ಸುಳ್ಯ ತಂಡವನ್ನು 25-8, 25-16 ಹಾಗೂ ಮಂಗಳೂರು ತಂಡವು ಬೆಳ್ತಂಗಡಿ ತಂಡವನ್ನು 25-23, 25-14 ಸೋಲಿಸಿ ಪೈನಲ್ ಪ್ರವೇಶಿಸಿತು.

ವೈಯಕ್ತಿಕ ಬಹುಮಾನ:

ಬಾಲಕರ ವಿಭಾಗದಲ್ಲಿ ಉತ್ತಮ ರಿಸೀವರ್ ಅಕಾಯಿ ಪುತ್ತೂರು, ಬೆಸ್ಟ್ ಆಲ್ ರೌಂಡರ್ ಅಹಮ್ಮದ್ ರಿಝಾ ಮಂಗಳೂರು, ಬೆಸ್ಟ್ ತ್ರೋವರ್ ಮನ್ವಿತ್ ಮಂಗಳೂರು ವೈಯಕ್ತಿಕ ಬಹುಮಾನ ಗಳಿಸಿದರು.

ಬಾಲಕಿಯರ ವಿಭಾಗದಲ್ಲಿ ಉತ್ತಮ ರಿಸೀವರ್ ಹಂಸಿನಿ ಮಂಗಳೂರು,ಬೆಸ್ಟ್ ಆಲ್ ರೌಂಡರ್ ಸಂಜನಾ ಮಂಗಳೂರು, ಬೆಸ್ಟ್ ತ್ರೋವರ್ ಚಿಂತನಾ ಸುಳ್ಯ ವೈಯಕ್ತಿಕ ಬಹುಮಾನ ಗಳಿಸಿದರು.

ಬಹುಮಾನ ವಿತರಣೆ:

ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ, ಅರೆಭಾಷೆ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲ್, ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ,ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರ ಶಿವರಾಮ ಯೇನೆಕಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್,  ಮುಖ್ಯ ಶಿಕ್ಷಕಿ ನಂದಾ ಹರೀಶ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್,ತಾಲೂಕು ಕ್ರೀಡಾ ಸಂಘದ ಅಧ್ಯಕ್ಷ ಹ್ಯಾರೀಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಉಪಾಧ್ಯಕ್ಷ ಗುಣವರ್ಧನ ಕೆದಿಲ, ವಿದ್ಯಾರ್ಥಿ ಸರಕಾರದ ಸಂಯೋಜಕ ಜಯಪ್ರಕಾಶ್. ಆರ್, ಕ್ರೀಡಾ ಸಂಯೋಜಕಿ ಸವಿತಾ ಕೈಲಾಸ್, ಕ್ರೀಡಾ ಕಾರ್ಯದರ್ಶಿ ಧನುಷ್ ಕಾಶಿಕಟ್ಟೆ, ಪ್ರಮುಖರಾದ ಭಾರತಿ ದಿನೇಶ್, ಶೋಭಾ ಗಿರಿಧರ್ ಬಹುಮಾನ ವಿತರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article