ಕೂಟ ಮಹಾಜಗತ್ತು ಕೃಷ್ಣ ಜನ್ಮಾಷ್ಟಮಿ ಸಂಭ್ರಮ
Tuesday, September 16, 2025
ಕೋಟ: ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯ ಮಹಿಳಾ ಸದಸ್ಯರಿಂದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಶ್ರೀ ಕೃಷ್ಣ ಸ್ತೋತ್ರ, ದ್ವಾದಶ ನಾಮ ಪಠಣ, ಭಜನೆ ಜರಗಿತು.
ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಪಂಕಜ ಐತಾಳ್, ಕೋಶಾಧಿಕಾರಿ ಗೌರಿ ಹೊಳ್ಳ, ಸದಸ್ಯರಾದ ಅನುಪಮ, ವೀಣಾ ಮಯ್ಯ, ವಸಂತಿ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ, ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ, ಜತೆ ಕಾರ್ಯದರ್ಶಿ ಶ್ರೀನಿವಾಸ ಐಗಲ್, ಮೆನೇಜರ್ ಶಿವರಾಮ ರಾವ್ ಮತ್ತಿತರರು ಉಪಸ್ಥಿತರಿದ್ದರು.