ಕೋಟೇಶ್ವರ: ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ

ಕೋಟೇಶ್ವರ: ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ


ಕುಂದಾಪುರ: ಸಂಘ ಹಾಗೂ ಸಂಘಟನೆಗಳು ಬೆಳೆಯಬೇಕಾದರೆ ಸಮಾನ ಮನಸ್ಕರ ಅವಶ್ಯಕತೆ ಇದೆ. ಆಗ ಮಾತ್ರ ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡುವುದು ಸಾಧ್ಯ. ವಿಶ್ವಕರ್ಮರು ಎಂತಹ ಕಲ್ಲನ್ನಾದರೂ ಕೆತ್ತಿ ಸುಂದರ ಮೂರ್ತಿ ಮಾಡುತ್ತಾರೆ. ಆಗ ಆ ಮೂರ್ತಿಗೆ ಗೌರವ ಸಿಗುವಂತೆ, ನಾವು ಕೂಡಾ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಾಗ ನಮಗೂ ಗೌರವ ತಾನಾಗಿಯೇ ಸಿಗುತ್ತದೆ ಎಂದು ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಕೆ. ರಾಮರಾಯ ಆಚಾರ್ಯ ಹೇಳಿದರು.

ಅವರು ಕೋಟೇಶ್ವರ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ, ಶ್ರೀ ದೇವಿ ಮಹಿಳಾ ಮಂಡಳಿ ಕೋಟೇಶ್ವರ ಇವರುಗಳ ಸಹಯೋಗದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದಭ೯ದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಎಸ್. ಸುಬ್ರಹ್ಮಣ್ಯ ಆಚಾರ್ಯ, ಕುಂಭಾಸಿ ಹಾಗೂ ಭರತನಾಟ್ಯ ಕಲಾವಿದೆ ಪ್ರಣಮ್ಯ ಆಚಾರ್ಯ ಅರಸರಬೆಟ್ಟು ಅವರನ್ನು ಸಮ್ಮಾನಿಸಲಾಯಿತು.

ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ ಕೋಟೇಶ್ವರ ಇದರ ಅಧ್ಯಕ್ಷ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮಾತನಾಡಿ, ಬದಲಾದ ವೇಗದ ಬದುಕಿನ ನಡುವೆ ನಮ್ಮ ಸಮಾಜದ ಧಾಮಿ೯ಕ ವಿಚಾರದಲ್ಲಿ ಯುವ ಸಮುದಾಯಗಳ ಭಾಗವಹಿಸುವಿಕೆ ಕಡಿಮೆಯಾಗುತ್ತಿದ್ದು, ನಾವು ಎಲ್ಲೋ ಎಡವುತ್ತಿದ್ದೇವೆ ಎನ್ನುವ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಇಂದು ಹೆಚ್ಚಾಗಿದೆ ಎಂದು ತಿಳಿಹೇಳಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ರಥಶಿಲ್ಪಿ ಲಕ್ಷ್ಮೀ ನಾರಾಯಣ ಆಚಾಯ೯, ಕೋಟೇಶ್ವರ ಶುಭಹಾರೈಸಿದರು.

ಪುರೋಹಿತ ರೋಹಿತಾಕ್ಷ ಆಚಾರ್ಯ, ಕುಂಭಾಸಿ ಶುಭಾಶಂಸನೆಗೈದರು.

ಕಾಯ೯ಕ್ರಮದಲ್ಲಿ ಶ್ರೀ ಕೋಟೇಶ್ವರ ವಿಶ್ವಕರ್ಮ ಸಮಾಜ ಯುವಕ ದಳದ ಅಧ್ಯಕ್ಷ ಚಂದ್ರಯ್ಯ ಆಚಾರ್ಯ ತೆಕ್ಕಟ್ಟೆ, ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ ಕೋಟೇಶ್ವರ ಇದರ ಗೌರವಾಧ್ಯಕ್ಷ ಸುರೇಶ ಆಚಾರ್ಯ, ಸಾಂತಾವರ, ಶ್ರೀ ದೇವಿ ಮಹಿಳಾ ಮಂಡಳಿ, ಕೋಟೇಶ್ವರ ಇದರ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ, ತೆಕ್ಕಟ್ಟೆ, ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಕೋಟೇಶ್ವರ ಇದರ ಕಾರ್ಯದರ್ಶಿ ಸತೀಶ್ ಆಚಾರ್ಯ, ಕುಂಬ್ರಿ ಮತ್ತಿತರರು ಉಪಸ್ಥಿತರಿದ್ದರು.

ಸತೀಶ್ ಅಚಾಯ೯ ಸ್ವಾಗತಿಸಿ, ವಿನೇಂದ್ರ ಆಚಾಯ೯ ಕುಂಭಾಶಿ ಸಹಕರಿಸಿದರು. ಗಣೇಶ್ ಆಚಾಯ೯ ಕುಂಬ್ರಿ ನಿರೂಪಿಸಿ, ಯೋಗಿರಾಜ್ ಆಚಾಯ೯ ಬೇಳೂರು ವಂದಿಸಿದರು. ಬಳಿಕ ಸಂಘದ ಸದಸ್ಯರು ಹಾಗೂ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದವು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article