
ಮಟ್ಟು ಬೀಚ್ ಸಮುದ್ರದಲ್ಲಿ ಈಜಾಟ: ಓರ್ವ ವಿದ್ಯಾರ್ಥಿ ದುರ್ಮರಣ
Sunday, September 21, 2025
ಶಿರ್ವ: ಕಟಪಾಡಿ ಸಮೀಪದ ಮಟ್ಟು ಬೀಚ್ ಬಳಿ ಸಮುದ್ರದಲ್ಲಿ ಆಟವಾಡುತ್ತಾ ಈಜುತಿದ್ದ ಆರು ವಿದ್ಯಾರ್ಥಿಗಳ ತಂಡದಲ್ಲಿ ಓರ್ವ ವಿದ್ಯಾರ್ಥಿ ದುರ್ಮರಣ ಹೊಂದಿದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಮಣಿಪಾಲದ ಸಿಪಿಎಸ್ ವಿದ್ಯಾರ್ಥಿ ಮಧ್ಯಪ್ರದೇಶ ಮೂಲದ ವೀರೂರುಲ್ಕರ್ (18) ಎಂಬಾತ ಸಾವಿಗೀಡಾದ ವಿದ್ಯಾರ್ಥಿ.
ಸಮುದ್ರದಲ್ಲಿ ಈಜಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಈ ವಿದ್ಯಾರ್ಥಿಗಳ ತಂಡವನ್ನು ಎಚ್ಚರಿಸಿದ್ದರು. ಸ್ಥಳವನ್ನು ಬದಲಾಯಿಸಿ ಮತ್ತೊಂದು ಭಾಗದಲ್ಲಿ ಈಜಾಟ ನಡೆಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸ್ಥಳೀಯರಾದ ಆರ್ಯನ್, ಪ್ರವೀಣ್ ಮತ್ತಿತರರು ರಕ್ಷಣಾ ಕಾರ್ಯ ನಡೆಸಿದ್ದರು.
ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.