ಪಡಿತರ ಚೀಟಿ ಇಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಕೂಡ ಹಣ ಪಾವತಿಸಬೇಕಾಗಿದೆ: ಪವನ್ ಕುಮಾರ್ ಶಿರ್ವ ಆರೋಪ

ಪಡಿತರ ಚೀಟಿ ಇಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಕೂಡ ಹಣ ಪಾವತಿಸಬೇಕಾಗಿದೆ: ಪವನ್ ಕುಮಾರ್ ಶಿರ್ವ ಆರೋಪ

ಶಿರ್ವ: ಸುಮಾರು 4 ವರ್ಷಗಳಿಂದ ಹೊಸ ಪಡಿತರ ಚೀಟಿ ಮಾಡಲು ಅವಕಾಶ ಇಲ್ಲ. ಪ್ರಸ್ತುತವಾಗಿಯೂ ತಿದ್ದುಪಡಿಗೆಯೇ ನೀಡುತ್ತಾರೋ ಹೊರತು ಹೊಸ ಪಡಿತರ ಚೀಟಿ ಮಾಡಲು ಅವಕಾಶ ನೀಡದಿರುವುದರಿಂದ ತುಂಬಾ ಜನ ವಂಚಿತರಾಗಿದ್ದಾರೆ. ಸರ್ಕಾರ ಉತ್ತಮ ಒಂದು ಯೋಜನೆಯಾದ ಆಯುಷ್ಮಾನ್ ಭಾರತ್ ಸೇವೆಯನ್ನು ಪಡೆಯಬೇಕಾದರೂ ಪಡಿತರ ಚೀಟಿ ಕಡ್ಡಾಯವಾಗಿರುತ್ತದೆ.

ಪ್ರಸ್ತುತವಾಗಿ ಜನರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಾಲಾದರೆ ಪಡಿತರ ಚೀಟಿ ಇಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಕೂಡ ಹಣ ಕಟ್ಟುವಂತಾಗಿದೆ. ಪ್ರತಿಯೊಂದ ಪರೀಕ್ಷೆಗೆ ಕೂಡ ಹಣ ಕಟ್ಟಬೇಕಾಗಿದೆ. ಆದರಿಂದ ಸರ್ಕಾರ ಮತ್ತು ಆಹಾರ ಇಲಾಖಾ ಸಚಿವರು ಇದರ ಬಗ್ಗೆ ಆದಷ್ಟು ಬೇಗ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಿ ಬಡ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪವನ್ ಕುಮಾರ್ ಶಿರ್ವ ಪ್ರಕಟಣೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article