ಮೋದಿ ಗ್ಲಾಸ್ ಪೇಂಟಿಂಗ್ ರಚಿಸಿದ 2ನೇ ತರಗತಿ ವಿದ್ಯಾರ್ಥಿ

ಮೋದಿ ಗ್ಲಾಸ್ ಪೇಂಟಿಂಗ್ ರಚಿಸಿದ 2ನೇ ತರಗತಿ ವಿದ್ಯಾರ್ಥಿ


ಉಳ್ಳಾಲ: ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನ. ಈ ಪ್ರಯುಕ್ತ ಅವರಿಗೆ ಉಳ್ಳಾಲ ತಾಲೂಕು ಕುರ್ನಾಡು ಹೂವಿನಕೊಪ್ಪಲ ನಿವಾಸಿ ಯನ್ಷ್ ಸಿ. ಶೆಟ್ಟಿ ಪ್ರಧಾನಮಂತ್ರಿಗಳಿಗೆ ಪುಟ್ಟ ಉಡುಗೊರೆ ನೀಡಿದ್ದಾನೆ.


ಪ್ರಧಾನಿ ಅವರು ತಮ್ಮ ತಾಯಿಯ ಜೊತೆ ಕುಳಿತಿರುವ ಗ್ಲಾಸ್ ಪೇಂಟಿಂಗ್ ರಚಿಸಿ ಅವರಿಗೆ ಕಳುಹಿಸಿದ್ದಾನೆ. ಈತ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 2ನೇ ತರಗತಿ ವಿದ್ಯಾರ್ಥಿ. ಕುರ್ನಾಡು ಹೂವಿನಕೊಪ್ಪಲದ ಚಂದ್ರಹಾಸ ಶೆಟ್ಟಿ-ಜಯಲಕ್ಷ್ಮೀ ದಂಪತಿ ಪುತ್ರ.

ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಚಿತ್ರಕಲಾ ಶಿಕ್ಷಕ ಮನೋಜ್ ಅವರಿಂದ ಚಿತ್ರಕಲೆಯ ತರಬೇತಿ ಪಡೆಯುತ್ತಿದ್ದಾನೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article