ನಗರಸಭೆ ಪೌರಾಯುಕ್ತ ಆಗಿ ತೇಜು ಮೂರ್ತಿ: ನವೀನ್ ಹೆಗ್ಡೆ ಮುಂದುವರಿಕೆಗೆ ಹೈಕೋರ್ಟ್ ತಡೆ
Tuesday, September 30, 2025
ಉಳ್ಳಾಲ: ನಗರಸಭೆ ಪ್ರಭಾರ ಪೌರಾಯುಕ್ತ ನವೀನ್ ಹೆಗ್ಡೆ ಅವರ ನೇಮಕಾತಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರ ನೇಮಕಾತಿ ಆದೇಶ ಹಿಂಪಡೆದು ತೆರವಾದ ಸ್ಥಾನಕ್ಕೆ ಪ್ರಭಾರ ಪೌರಾಯುಕ್ತ ಆಗಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಗಳೂರು ಇದರ ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜು ಮೂರ್ತಿ ಅವರನ್ನು ನೇಮಕ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.
2025 ಆಗಸ್ಟ್ 31 ರಂದು ಉಳ್ಳಾಲ ನಗರಸಭೆಯಲ್ಲಿ ಕಂದಾಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ್ ಹೆಗ್ಡೆ ಅವರನ್ನು ಪೌರಾಯುಕ್ತ ಆಗಿ ನೇಮಕಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಹೈಕೋರ್ಟ್ ಸೆಪ್ಟೆಂಬರ್ 23 ರಂದು ನವೀನ್ ಹೆಗ್ಡೆ ಅವರು ಪೌರಾಯುಕ್ತ ಆಗಿ ಮುಂದುವರಿಕೆಗೆ ತಡೆಯಾಜ್ಞೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ದಿಂದ ಜಾರಿಗೆ ಬರುವಂತೆ ಕರ್ತವ್ಯ ದಿಂದ ಬಿಡುಗಡೆಗೊಳಿಸಿ ಜಿಲ್ಲಾಡಳಿತ ಆದೇಶ ನೀಡಿದೆ.