ಪೊಳಲಿಯಿಂದ ಮಂಗಳೂರಿಗೆ ಬೊಂಡಂತಿಲ ರಸ್ತೆಯಾಗಿ ಸಾರಿಗೆ ವ್ಯವಸ್ಥೆಗೆ ಚಾಲನೆ

ಪೊಳಲಿಯಿಂದ ಮಂಗಳೂರಿಗೆ ಬೊಂಡಂತಿಲ ರಸ್ತೆಯಾಗಿ ಸಾರಿಗೆ ವ್ಯವಸ್ಥೆಗೆ ಚಾಲನೆ


ಬಂಟ್ವಾಳ: ಮಂಗಳೂರಿನಿಂದ ಪೊಳಲಿಗೆ ತಾರಿಗುಡ್ಡೆ-ಬೊಂಡಂತಿಲ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ನಗರ ಸಾರಿಗೆಯ ಬಸ್ ಸಂಚಾರಕ್ಕೆ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು.

ಕೆಎಸ್‌ಆರ್‌ಟಿಸಿಯ ಮಂಗಳೂರು-3ನೇ ಘಟಕದಿಂದ ಈ ಹೊಸ ನಗರ ಸಾರಿಗೆಯನ್ನು ಕಲ್ಪಿಸಲಾಗಿದ್ದು, ಈ ಬಸ್ ಮಂಗಳೂರಿನಿಂದ ಗುರುಪುರ-ವಾಮಂಜೂರು-ತಾರಿಗುಡ್ಡೆ ಬೊಂಡಂತಿಲ ಮಾರ್ಗವಾಗಿ ಪೊಳಲಿಯತ್ತ ಕಾರ್ಯಾಚರಣೆ ಮಾಡಲಿದೆ.

ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಅವರು ಈ ಸಾರಿಗೆ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಕರಿಯಂಗಳ ಗ್ರಾ.ಪಂ. ಅಧ್ಯಕ್ಷ ರಾಧ ಲೋಕೇಶ್, ಉಪಾಧ್ಯಕ್ಷ ರಾಜು ಕೋಟ್ಯಾನ್, ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪ್ಪಾಡಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಈ ರೂಟಿನಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಇದ್ದ ಹಲವು ಸಮಯದ ಬೇಡಿಕೆ ಇದೀಗ ಈಡೇರಿದ್ದು, ಈ ಭಾಗದ ಸಾರ್ವಜನಿಕ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article