ಎನ್‌ಡಿಎ ಲಿಖಿತ ಪರೀಕ್ಷೆ: ಎಕ್ಸ್‌ಪರ್ಟ್ ಕಾಲೇಜಿನ 29 ಮಂದಿ ವಿದ್ಯಾರ್ಥಿಗಳು ತೇರ್ಗಡೆ
Friday, October 3, 2025
ಮಂಗಳೂರು: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ 29 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಅಂತಿಮ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಇಂದಿರಾ ಎಂ. ಹೂಲಿ, ಕೃತಿಕಾ ಮಲ್ಲಿಕಾರ್ಜುನ ಪಾಟೀಲ್, ದಕ್ಷ್ ವಿಪಿನ್, ನರೆನ್ ವಿ., ಮನೋಜ್ ಎಂ., ಸಮಯ್ ಎ.ಎಸ್., ಧೀರಜ್ ಎನ್., ಭವಿಷ್ ಬೆನಕ ಕೆ.ಎಸ್., ಅಂಕಿತ್ ಅಶೋಕ್ ದೊಡವಾಡ, ಅಮೋಘ್ ಬಿ.ಲೋಕ, ಉಜ್ವಲ್ ಶಿವಾನಂದ್ ಬೂದಿಹಾಳ್, ಪಾಲ್ಗುಣ್ ಟಿ.ಎಸ್., ಮಿಲನ್ ಮಾದೇಶ್ ಎಸ್., ಉದಯ್ ಕೃಷ್ಣ ಆರ್., ತನ್ಮಯ್ ಆರ್.ಎಸ್. ಪಾಡಿಗಟ್ಟೆ, ವೀರ್ ರತ್ಕಲ್, ಸಾಯಿ ಶೋಬಿತ್ ಎಸ್., ಜೀವನ್ ಫ್ರಾನ್ಸಿಸ್ ಫನಾಂಡಿಸ್, ಚೆನ್ನಬಸವ, ಸಾತ್ವಿಕ್ ಸುನಿಲ್ ಕದಂ, ಮೊಹಮ್ಮದ್ ಶಾಜೆಬ್, ವಿದ್ವತ್ ಎಂ., ಅಮೋಘವರ್ಷ ಜಿ., ಗೌತಮ್ ಜಿ., ಸಂಭ್ರಮ್ ವಿನೋದ್, ಮೋಹಿತ್ ಎಸ್., ಚಂದನ್ ಎಚ್.ಆರ್., ಟಿ. ಶ್ರೀಸಾಯಿ ಕಾರ್ತಿಕ್, ಪ್ರೀತಮ್ ಸಂಕನಲ್ ಎನ್‌ಡಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು.
ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.



























