ಯು.ಟಿ. ಖಾದರ್ ಅಭಿಮಾನಿ ಬಳಗದ ವತಿಯಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ-ಹಂಪಲು ವಿತರಣೆ

ಯು.ಟಿ. ಖಾದರ್ ಅಭಿಮಾನಿ ಬಳಗದ ವತಿಯಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ-ಹಂಪಲು ವಿತರಣೆ


ಬಂಟ್ವಾಳ: ಸದಾ ಬಡವರ ವಿಶೇಷ ಕಾಳಜಿಯನ್ನು ಹೊಂದಿರುವ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಬಡವರ ಆಶೀರ್ವಾದದಿಂದ ರಾಜಕೀಯವಾಗಿ ಇನ್ನಷ್ಟು ಉನ್ನತಿಗೇರಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ, ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಆಶಿಸಿದರು.

ಸ್ಪೀಕರ್ ಯು.ಟಿ. ಖಾದರ್ ಅವರ 55ನೇ ಹುಟ್ಟು ಹಬ್ಬದ ಪ್ರಯುಕ್ತ ಯು.ಟಿ. ಖಾದರ್ ಅಭಿಮಾನಿ ಬಳಗ, ಪುದು-ಫರಂಗಿಪೇಟೆ ಇದರ ವತಿಯಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣ-ಹಂಪಲು ವಿತರಿಸಿ ಮಾತನಾಡಿದ ಅವರು, ಯು.ಟಿ. ಖಾದರ್ ಅವರ ಸೇವೆಗೆ ಅರ್ಹ ಪ್ರತಿಫಲವಾಗಿ ಇದೀಗ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಎಂದರು.

ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿದರು.

ಈ ಸಂದರ್ಭ ಪುದು ಗ್ರಾ ಪಂ ಉಪಾಧ್ಯಕ್ಷೆ ರುಕ್ಸಾನಾ, ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ರಶೀದಾ ಬಾನು, ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಇಕ್ಬಾಲ್ ಸುಜೀರ್, ಬಂಟ್ವಾಳ ಸರಕಾರಿ ಆಸ್ಪತ್ರೆಯ ಕ್ಯಾಶುವಾಲಿಟಿ ಮೆಡಿಕಲ್ ಆಫೀಸರ್ (ಸಿಎಂಒ) ಡಾ. ಸಮೀಕ್ಷಾ, ಮುಡಿಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೃಂದಾ ಪೂಜಾರಿ ಮೇರಮಜಲು, ಮಂಗಳೂರು ಹಿದಾಯ ಫೌಂಡೇಶನ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಸದಸ್ಯ ಟಿ.ಕೆ. ಬಶೀರ್ ಫರಂಗಿಪೇಟೆ, ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ಆಸಿಫ್ ಇಕ್ಬಾಲ್, ಸಾಮಾಜಿಕ ಕಾರ್ಯಕರ್ತ ಬುಖಾರಿ ಕುಂಪಣಮಜಲು, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ದಿಲ್ ಪೇರಿಮಾರ್, ಪುದು ವಲಯ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ, ಗ್ರಾ.ಪಂ. ಸದಸ್ಯೆ ಸಾರಮ್ಮ, ಎನ್‌ಎಸ್‌ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಬಾರಕ್, ಪುದು ಗ್ರಾ.ಪಂ. ಸದಸ್ಯರುಗಳಾದ ವಿಶು ಕುಮಾರ್, ಇಕ್ಬಾಲ್ ಪಾಡಿ, ಮೊಹಮ್ಮದ್ ಮೋನು, ರಝಾಕ್ ಅಮ್ಮೆಮಾರು, ಹಿಶಾಂ ಫರಂಗಿಪೇಟೆ, ಮುಮ್ತಾಝ್ ಸುಜೀರು, ನೆಬಿಸಾ, ಮಾಜಿ ಸದಸ್ಯ ಲತೀಫ್ ಕರ್ಮಾರ್, ಪುದು ವಲಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲಿಕ್ ಕುಂಪಣಮಜಲು, ಪ್ರಮುಖರಾದ ಎಂ.ಕೆ. ಮೊಹಮ್ಮದ್, ಸಲಾಂ ಮಲ್ಲಿ, ಇಮ್ರಾನ್ ಮಾರಿಪಳ್ಳ, ಫಯಾಝ್ ಕಾನಾ, ಮುಸ್ತಫಾ ಕೇಶನಮುಗೇರು, ಸಫ್ವಾನ್ ಕುಂಜತ್ಕಲ, ಫರಾಝ್ ಕರ್ಮಾರ್, ಫರ್ದಾನ್ ಫರಂಗಿಪೇಟೆ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article