ಕಟೀಲಿನಲ್ಲಿ ಮಹಾರಂಗಪೂಜೆ, ಅಕ್ಷರಾಭ್ಯಾಸ, ವಾಹನಪೂಜೆ

ಕಟೀಲಿನಲ್ಲಿ ಮಹಾರಂಗಪೂಜೆ, ಅಕ್ಷರಾಭ್ಯಾಸ, ವಾಹನಪೂಜೆ


ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಹಾನವಮಿಯಂದು 600ಕ್ಕೂ ಹೆಚ್ಚು ಆರತಿಗಳಿಂದ ಒಂದೂವರೆ ಗಂಟೆಗಳ ಕಾಲ ಮಹಾರಂಗಪೂಜೆ ನಡೆಯಿತು. ದೇವಸ್ಥಾನದ ಒಳಾಂಗಣದಲ್ಲಿ ಭಕ್ತರನೇಕರು  ಚೆಂಡೆ, ಶಂಖ, ಜಾಗಟೆ, ವಾದ್ಯಗಳನ್ನು ನುಡಿಸಿ, ಸಂಕೀರ್ತನೆ, ಭಜನೆಗಳಿಂದ ರಂಗಪೂಜೆಯ ವೈಭವವನ್ನು ಭಕ್ತಿಪೂರ್ಣವಾಗಿ ಹೆಚ್ಚಿಸಿದರು. ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಮೂಡೆಪ್ರಸಾದ ಸ್ವೀಕರಿಸಿದರು.

ಸರಸ್ವತೀ ಸದನದಲ್ಲಿ ದಿನವಿಡೀ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ ನಡೆಯಿತು. ಕಟೀಲು ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.

ಸೇವಾದರದಲ್ಲಿ ಕೊಂಚ ಇಳಕೆ:

ಅಕ್ಟೋಬರ್ ಒಂದರಿಂದ ದೇವಳದಲ್ಲಿ ಹೊಸ ಸೇವಾದರ ಜಾರಿಗೆ ಬಂದಿದೆ.

ಸೇವಾದರ ಏರಿಕೆ ಬಗ್ಗೆ ದೇಗುಲ ಪ್ರಕಟನೆ ಕೊಟ್ಟ ಬಳಿಕ ಕೆಲವರು ದರ ಇಳಿಸುವಂತೆ ಜನಪ್ರತಿನಿಧಿಗಳು, ದೇಗುಲದ ಆಡಳಿತ ಮಂಡಳಿಗೆ ಮನವಿ ನೀಡಿದ್ದರು. ಪರಿಣಾಮ ಹೂವಿನ ಪೂಜೆ ರೂ.200, (120ರೂಪಾಯಿಯಿಂದ 220ಕ್ಕೆ ಏರಿಕೆಯಾಗಿತ್ತು), ಕಾರ್ತಿಪೂಜೆ ರೂ. 20(ರೂ.10ರಿಂದ 25ರೂಗೆ ಏರಿಕೆಯಾಗಿತ್ತು), ತೀರ್ಥಬಾಟ್ಲಿ ರೂ.10(15ರೂ. ಆಗಿತ್ತು) ಹೀಗೆ ಕೆಲವು ಸೇವೆಗಳ ಏರಿದ ದರದಲ್ಲಿ ಕೊಂಚ ಇಳಿಕೆ ಮಾಡಿ ದರ ಜಾರಿಯಾಗಿದೆ.

ಮಹಾನವಮಿ ಹಾಗೂ ವಿಜಯದಶಮಿ ಈ ಎರಡೂ ದಿನಗಳಲ್ಲಿ 1,500ಕ್ಕೂ ಹೆಚ್ಚು ವಾಹನ ಪೂಜೆ, ನೂರರಷ್ಟು ಮಕ್ಕಳಿಗೆ ಅಕ್ಷರಾಭ್ಯಾಸ, 6,100 ಹೂವಿನ ಪೂಜೆ, 4,500 ಕುಂಕುಮಾರ್ಚನೆ ಸೇವೆಗಳಲ್ಲಿದೆ ಐನೂರಕ್ಕೂ ಹೆಚ್ಚು ಸೀರೆ ದೇವರಿಗೆ ಕಾಣಿಕೆಯಾಗಿ ಬಂದಿವೆ.

ಕಳೆದ ವರುಷ ಇದೇ ದಿನಗಳಲ್ಲಿ ಆದ ಸೇವೆಗಳ ಸಂಖ್ಯೆಗೂ ಈ ಬಾರಿ ಆದ ಸೇವೆಗಳ ಸಂಖ್ಯೆಗಳಿಗೂ ದೊಡ್ಡ ವ್ಯತ್ಯಾಸ ಕಂಡಬಂದಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article