ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಸಮುದಾಯದ ಬದುಕು: ಉಮರ್ ಯು.ಹೆಚ್.

ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಸಮುದಾಯದ ಬದುಕು: ಉಮರ್ ಯು.ಹೆಚ್.


ಮಂಗಳೂರು: ಯಾವುದೇ ಜನ ಸಮುದಾಯದ ಮಾತೃ ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ. ಆ  ಸಮುದಾಯದ ಪರಿಪೂರ್ಣ ಬದುಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್. ಅಭಿಪ್ರಾಯ ಪಟ್ಟರು. 

ಇಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕಲ್ಲಡ್ಕ ಮುರಬೈಲ್ ಯೂನಿಯನ್‌ನ ಸಹಯೋಗದೊಂದಿಗೆ ಕಲ್ಲಡ್ಕ ಮ್ಯೂಸಿಯಂನಲ್ಲಿ ಹಮ್ಮಿಕೊಂಡಿದ್ದ ಬ್ಯಾರಿ ಭಾಷಾ ದಿನಾಚರಣೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮಾತೃ ಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯ ನಿರಂತರವಾಗಿ ನಡೆದಾಗ ಮಾತ್ರ ಆ ಸಮುದಾಯ ಜೀವಂತವಾಗಿರಲು ಸಾಧ್ಯ ಎಂದು ತಿಳಿಸಿದರು.

ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಬ್ಯಾರಿ ಭಾಷಾ ದಿನಾಚರಣೆಯ ಭಿತ್ರಿಪತ್ರ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಬಂಟ್ವಾಳ ಬ್ಯಾರಿ ಫೌಂಡೇಶನ್ ಅಧ್ಯಕ್ಷ ಪಿ.ಎ. ರಹೀಮ್, ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು, ಬಂಟ್ವಾಳ ತಾಲೂಕು ಜಮೀಯತುಲ್ ಫಲಾಹ್ ಅಧ್ಯಕ್ಷ ಅಬ್ಬಾಸ್ ಅಲಿ ಬಿ.ಎಂ., ಕಲ್ಲಡ್ಕ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲ ಹಾಜಿ ಕೋಡಿ, ದ.ಕ. ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್ ಅಲಿ,  ದಂತ ವೈದ್ಯೆ, ಬರಹಗಾರ್ತಿ ಡಾ. ಜುವೇರಿಯಾ ಮುಫೀದಾ, ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಶನ್?ನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್, ಕಲ್ಲಡ್ಕ ಮುರಬೈಲ್ ಯೂನಿಯನ್‌ನ ಅಧ್ಯಕ್ಷ ಹಬೀಬ್ ಡೈಲಿ ಫ್ರೆಶ್, ಕಲ್ಲಡ್ಕ ಮ್ಯೂಸಿಯಂನ ಮುಹಮ್ಮದ್ ಯಾಸೀರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಅಬ್ದುಲ್ ಲತೀಫ್ ನೇರಳಕಟ್ಟೆ, ಝಕರಿಯಾ ಕಲ್ಲಡ್ಕ, ಪಿ. ಮುಹಮ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

 ಮುಹಮ್ಮದ್ ಶರೀಫ್ ನಿರ್ಮುಂಜೆ, ಅಶ್ರಫ್ ಅಪೊಲೊ ಬ್ಯಾರಿ ಗೀತೆಗಳನ್ನು ಹಾಡಿದರು. ಅಕಾಡೆಮಿಯ ಸದಸ್ಯ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಸದಸ್ಯೆ ಸಾರಾ ಅಲಿ ಪರ್ಲಡ್ಕ ಧನ್ಯವಾದವಿತ್ತರು. ಸದಸ್ಯ ಯು.ಹೆಚ್. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಬಿ.ಎಸ್. ಮುಹಮ್ಮದ್, ಹಮೀದ್ ಹಸನ್ ಮಾಡೂರು, ಹಾಜಿ ಯು.ಕೆ. ಹಮೀದ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article