ಕಟೀಲು ಏಳನೆಯ ಯಕ್ಷಗಾನ ಮೇಳ ಉದ್ಘಾಟನೆ

ಕಟೀಲು ಏಳನೆಯ ಯಕ್ಷಗಾನ ಮೇಳ ಉದ್ಘಾಟನೆ


ಕಟೀಲು: ಯಕ್ಷಗಾನ ಪ್ರಿಯೆ ಕಟೀಲು ದುರ್ಗೆಯ ಯಕ್ಷಗಾನ ಸೇವೆ ಮಾಡಸಲು ಭಕ್ತರು ವರುಷಗಟ್ಟಲೆ ಕಾಯಬೇಕು ಎನ್ನುವುದು ಆಕೆಯ ಮಹಿಮೆಯನ್ನು ಸಾರುತ್ತದೆ. ಭಕ್ತರ ಹರಕೆ ತೀರಿಸಲು ಏಳನೆಯ ಮೇಳವನ್ನು ಆರಂಭಿಸುತ್ತಿರುವುದು ಆ ಮೂಲಕ ಕಲೆ, ಕಲಾವಿದರನ್ನು ಬೆಳೆಸುವ ಕೆಲಸ ಆಗುತ್ತಿರುವುದು ಅಭಿನಂದನೀಯ ಎಂದು ಕಾಣಿಯೂರು ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಏಳನೇ ಯಕ್ಷಗಾನ ಮೇಳದ ಪಾದಾರ್ಪಣೆಯ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.  

ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ವೇದವ್ಯಾಸ ತಂತ್ರಿ, ಕೃಷ್ಣರಾಜ ತಂತ್ರಿ, ಅರ್ಚಕರಾದ ಲಕ್ಷೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಯಕ್ಷಧರ್ಮಬೋಧಿನಿ ಟ್ರಸ್ಟ್‌ನ ರಾಘವೇಂದ್ರ ರಾವ್ ಬಜಪೆ, ಬಿಪಿನ್‌ಚಂದ್ರ ಶೆಟ್ಟಿ, ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಪ್ರಕಾಶ್ ಅಳ್ವ ಪಡುಮನೆ, ಗಿರೀಶ್ ಶೆಟ್ಟಿ, ದೊಡ್ದಯ್ಯ ಮೂಲ್ಯ, ಅರುಣ್ ಶೆಟ್ಟಿ ಕೊಡೆತ್ತೂರುಗುತ್ತು, ಭರತ್ ಶೆಟ್ಟಿ, ದಿವಾಕರ ರಾವ್ ಸಿತ್ಲ, ಪುರುಷೋತ್ತಮ ಶೆಟ್ಟಿ, ವಿಜಯ ಶೆಟ್ಟಿ, ಶಿವಾಜಿ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ,  ಗಣೇಶ್ ರೈ ವಾಮಂಜೂರು ಮುಂತಾದವರಿದ್ದರು.

ಯಕ್ಷಸಪ್ತಾಹದೊಂದಿಗೆ ನೂತನ ಮೇಳದ ಉದ್ಘಾಟನೆ..

ನವೆಂಬರ್ 16ರಂದು ಏಳನೆಯ ಮೇಳದ ಪಾದಾರ್ಪಣೆ, ಏಳೂ ಮೇಳಗಳ ತಿರುಗಾಟ ಆರಂಭ ನಡೆಯಲಿದ್ದು, ಪಲಿಮಾರು ಸ್ವಾಮೀಜಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯ ಸಚಿವರಾದ ರಾಮಲಿಂಗಾರೆಡ್ಡಿ, ಶಿವರಾಜ ತಂಗದಡಿ ಮುಂತಾದವರು ಭಾಗವಹಿಸಲಿದ್ದಾರೆ.

ಏಳನೆಯ ಮೇಳದ ಉದ್ಘಾಟನೆಯ ಪೂರ್ವಾಭಾವಿಯಾಗಿ ಏಳುದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

9ರಂದು ಕಟೀಲು ಮೇಳಗಳ ಬಯಲಾಟಗಳ ಖಾಯಂ ಸೇವಾದಾರರ ಸಮಾವೇಶ, 10ಕ್ಕೆ ಕಟೀಲು ಯಕ್ಷಗಾನ ಮೇಳಗಳ ಇತಿಹಾಸ ದಾಖಲೀಕರಣ ಕಾರ್ಯಾಗಾರ, 

11ಕ್ಕೆ ಕಟೀಲು ಹಾಗೂ ಯಕ್ಷಗಾನ ಮೇಳಗಳ ಯೂಟ್ಯೂಬ್, ಫೇಸ್‌ಬುಕ್ ಪ್ರಸಾರಕರು, ವಾಟ್ಸಪ್ ವೇದಿಕೆಗಳ ಪ್ರಮುಖರ ಹಾಗೂ ಪ್ರೇಕ್ಷಕರ ಸಮಾವೇಶ, 12ಕ್ಕೆ ಯಕ್ಷಪ್ರಭಾ ಬರಹಗಾರರ, ಓದುಗರ ಸಮಾವೇಶ, 13ಕ್ಕೆ ಕಟೀಲು ಮೇಳಗಳ ಕಲಾವಿದರ ಸಮಾವೇಶ 14ಕ್ಕೆ ಕಟೀಲು ಮೇಳಗಳ ವೇಷಗಳ ಛಾಯಾಚಿತ್ರಗಳ ಪ್ರದರ್ಶನ, 15ಕ್ಕೆ ಬಜಪೆಯಿಂದ ವಾಹನಗಳಲ್ಲಿ ಮೇಳಗಳ ಪರಿಕರಗಳ ಮೆರವಣಿಗೆ, ಎಕ್ಕಾರಿನಿಂದ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮನ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article