ಗಾಂಧಿ ಎಂಬ ಬತ್ತದ ಸತ್ಯದ ಗಣಿಯ ಪ್ರಯೋಜನ ಯುವ ಜನತೆ ಪಡೆಯಬೇಕು: ಡಾ.ಎಂ. ವೀರಪ್ಪ ಮೊಯಿಲಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ. ಉದಯ ಕುಮಾರ್ ಇರ್ವತ್ತೂರು ಬರೆದಿರುವ ‘ಲೋಕಗೆಂದಿನ ಗಾಂಧಿಯೆರ್’ ಕೃತಿಯನ್ನು ಉರ್ವಸ್ಟೋರ್ನ ತುಳು ಭವನದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸತ್ಯ, ಅಹಿಂಸೆಯ ಶಕ್ತಿಯಿಂದ ದೇಶದ ಎಲ್ಲರಿಗೂ ಸ್ವಾತಂತ್ರ್ಯ ತಂದುಕೊಟ್ಟಿರುವುದು ಗಾಂದೀಜಿ ಎಂಬ ಶ್ರೀಮಂತ ವ್ಯಕ್ತಿತ್ವ. ಅಸ್ಪೃಶ್ಯತೆ ನಿವಾರಣೆಗೆ ಗಾಂಧೀಜಿ ಅವರಿಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಗುರುಗಳಾಗಿದ್ದರು. ಗಾಂಽಜಿ ಅವರ ಬಗ್ಗೆ ತುಳುವಿನಲ್ಲಿ ಅಪೂರ್ವ ಪುಸ್ತಕ ಹೊರತರಲಾಗಿದೆ ಎಂದರು.
ತುಳು ಭಾಷೆ, ಸಾಹಿತ್ಯ, ಸಂಪ್ರದಾಯದ ಹಿಂದೆ ಅದ್ಭುತ ಸಂಸ್ಕೃತಿ ಇದೆ. ತುಳುನಾಡಿನಲ್ಲಿ ಶೋಷಣೆಗೆ ಒಳಗಾದ ಮನುಷ್ಯರೇ ದೈವಗಳಾಗಿದ್ದಾರೆ. ಶೋಷಣೆ ಮಾಡಿದವರು ಇದೇ ದೈವಗಳ ಆರಾಧಕರಾಗಿದ್ದಾರೆ. ದೈವಗಳಾದ ಬಳಿಕ ಆರಾಧನೆ ಮಾಡುವ ಬದಲಿಗೆ ಶೋಷಣೆ ಮಾಡುವಾಗಲೇ ಆಲೋಚಿಸಬೇಕು ಎಂದು ಹೇಳಿದರು.
ಸೇರ್ಪಡೆಯಾಗಲಿ..
ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂಬ ಕನಸು ಎಲ್ಲರಿಗೂ ಇದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದೇ ಮೊದಲ ಹಾಗೂ ಕೊನೆಯ ಪ್ರಸ್ತಾವನೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಈ ಬಗ್ಗೆ ಕೇಂದ್ರ ಸರಕಾರ ವರದಿ ಪಡೆದುಕೊಂಡಿತ್ತು. ಈಗಿನ ಸರಕಾರ ಅದನ್ನು ಪರಿಗಣಿಸಿಲ್ಲ. ಶೀಘ್ರದಲ್ಲಿ ತುಳು ಭಾಷೆ ೮ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲಿ ಎಂದರಯ,
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ತುಳು ಅಕಾಡೆಮಿ ವತಿಯಿಂದ ವಿವಿಧ ದಾರ್ಶನಿಕರಿಗೆ ಸಂಬಂಽಸಿದ ಪುಸ್ತಕಗಳನ್ನು ತುಳುವಿನಲ್ಲಿ ಪ್ರಕಟಿಸಲಾಗುತ್ತಿದೆ. ಮಾತೃಭಾಷೆ ತುಳು ಕೇಳಿದಾಗ, ಓದಿದಾಗ ವಿಚಾರಗಳು ಮನಸ್ಸಿಗೆ ಆಪ್ತವಾಗುತ್ತವೆ. ಈ ಹಿನ್ನೆಲೆಯಲ್ಲಿ ತುಳುವಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ತುಳು ಎರಡನೇ ಅಧಿಕೃತ ಭಾಷೆಯಾಗಿ ಜಾರಿಗೊಳ್ಳಲಿದೆ ಎಂದರು.
‘ಲೋಕಗೆಂದಿನ ಗಾಂಧಿಯೆರ್’ ಕೃತಿ ಬರೆದ ಡಾ. ಉದಯ ಕುಮಾರ್ ಇರ್ವತ್ತೂರು ಮಾತನಾಡಿ, ಗಾಂಽಜಿ ಇಂದಿಗೂ ಜಗತ್ತಿಗೆ ಪ್ರೇರಣೆಯಾಗಿದ್ದಾರೆ. ಗಾಂಽ ಹೇಳಿದಂತೆ ಜನತೆ ಬದುಕಿದ್ದರು, ಈಗಲೂ ಬದಕುವವರಿದ್ದಾರೆ. ಮಂಗಳೂರಿಗೆ ಮೂರು ಬಾರಿ ಆಗಮಿಸಿದ ಗಾಂಧಿ ಸ್ಪೂರ್ತಿಯ ಚಿಲುಮೆ ಎಂದರು.
ಕೃತಿ ಪರಿಚಯ ಮಾಡಿದ ಮಂಗಳೂರಿನ ಮಹಾತ್ಮ ಗಾಂಧಿ ವಿಚಾರ ವೇದಿಕೆ ಕಾರ್ಯದರ್ಶಿ ಡಾ.ಎನ್. ಇಸ್ಮಾಯಿಲ್, ಯುವಜನತೆಗೆ ಗಾಂಧೀಜಿ, ಅವರ ವ್ಯಕ್ತಿತ್ವದ ಬಗ್ಗೆ ಹಿರಿಯರು ಮಾಹಿತಿ ನೀಡಿಲ್ಲ. ಈ ಕೊರತೆ ನೀಗಿಸಲು ‘ಲೋಕಗೆಂದಿನ ಗಾಂಽಯೆರ್’ ಕೃತಿ ಸಹಾಯಕವಾಗಲಿದೆ ಎಂದರು.
ಕೈಮಗ್ಗ ಪುನರುತ್ಥಾನ ಪ್ರವರ್ತಕರಾದ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಸುಳ್ಯದ ಗಾಂಧಿ ಚಿಂತನ ವೇದಿಕೆ ಸಂಚಾಲಕ ಹರೀಶ್ ಬಂಟ್ವಾಳ, ದ.ಕ. ಜಿಲ್ಲಾ ಗಾಂಧಿ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ. ಸುಂದರ ಬೆಳುವಾಯಿ ಅತಿಥಿಗಳಾಗಿದ್ದರು.
ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಸಂಚಾಲಕ ಕುಂಬ್ರ ದುರ್ಗಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಉದ್ಯಾವರ ನಾಗೇಶ್, ಬೂಬ ಪೂಜಾರಿ, ಸಂತೋಷ್ ಶೆಟ್ಟಿ ಹಿರಿಯಡ್ಕ, ಬಾಬು ಪಾಂಗಾಳ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ‘ತುಳುವ ನೆಲದಲ್ಲಿ ಲೋಕಮಾನ್ಯರು’ ಎಂಬ ವಿಷಯವಾಗಿ ವಿಚಾರಗೋಷ್ಠಿ ಹಾಗೂ ಸಂವಾದ ನಡೆಯಿತು.