ಪ್ರಭಾತ್ ಸಿಲ್ಕ್ಸ್ ಸಿಬಂದಿಗಳಿಗೆ ಆರೋಗ್ಯ ತಪಾಸಣೆ- ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ: ಬಾಹುಬಲಿ ಪ್ರಸಾದ್
Wednesday, October 1, 2025
ಮೂಡುಬಿದಿರೆ: ಇನ್ನರ್ ವ್ಹೀಲ್ ಕ್ಲಬ್ ಹಾಗೂ ರೋಟರಿ ಟೆಂಪಲ್ ಟೌನ್ ಆಫ್ ಮೂಡುಬಿದಿರೆ ಸಹಯೋಗದಲ್ಲಿ ನಮ್ಮ ಕ್ಲಿನಿಕ್ ಗಂಟಾಲ್ ಕಟ್ಟೆ ವತಿಯಿಂದ ಮಂಗಳವಾರ ಇಲ್ಲಿನ ಪ್ರಭಾತ್ ಸಿಲ್ಕ್ಸ್ ನ ಸಿಬಂದಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಎಂಸಿಎಸ್ ಸೊಸೈಟಿ ಅಧ್ಯಕ್ಷ, ಹಿರಿಯ ವಕೀಲ ಎಂ.ಬಾಹುಬಲಿ ಪ್ರಸಾದ್ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಶಿಬಿರವನ್ನು ಹಮ್ಮಿಕೊಂಡ ಇನ್ನರ್ ವ್ಹೀಲ್ ಕ್ಲಬ್ ಮತ್ತು ರೋಟರಿ ಟೆಂಪಲ್ ಟೌನ್‍ನ ಸೇವಾ ಕಾರ್ಯವನ್ನು ಅವರು ಶ್ಲಾಘಿಸಿದರು.
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ನಮ್ಮ ಕ್ಲಿನಿಕ್‍ನ ಡಾ.ಕಿರಣ್ ಲೋಬೊ ಗಂಟಾಲ್ ಕಟ್ಟೆಯಂತಹ ಹಳ್ಳಿಯಲ್ಲಿ ಪ್ರಾರಂಭವಾದ ನಮ್ಮ ಕ್ಲಿನಿಕ್ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ನಾವು ಆರೋಗ್ಯವಂತರಾಗಿದ್ದಾಗ ನಮ್ಮ ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡಬಹದು. ಪ್ರಭಾತ್ ಸಿಲ್ಕ್ಸ್ ತನ್ನ ಸಿಬಂದಿಗಳ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿರುವುದನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ ಪ್ರಭಾತ್ ಸಿಲ್ಕ್ಸ್ ನ ಮಾಲಕ ಪ್ರಭಾತ್‍ಚಂದ್ರ ಜೈನ್ ಹಿತಮಿತವಾದ ಆಹಾರ ಸೇವನೆ, ಯೋಗ, ಪ್ರಾಣಯಾಮದಿಂದ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಎಂದರು
ರೋಟರಿ ಟೆಂಪಲ್ ಟೌನ್‍ನ ಕಾರ್ಯದರ್ಶಿ ಭರತ್ ಶೆಟ್ಟಿ, ಇನ್ನರ್ ವೀಲ್ ಕ್ಲಬ್‍ನ ಕಾರ್ಯದರ್ಶಿ ಅನಿತಾ ಪ್ರಥ್ವಿರಾಜ್ ಶೆಟ್ಟಿ, ಎನ್‍ಜಿಒ ಹೆಚ್.ಎಸ್ ಜಾನಕಿ, ಲ್ಯಾಬ್ ಟೆಕ್ನಿಷಿಯನ್ ಸೌಜನ್ಯ ಉಪಸ್ಥಿತರಿದ್ದರು. ಪ್ರಭಾತ್‍ಸಿಲ್ಕ್ ನ ಲತಾ ಸ್ವಾಗತಿಸಿದರು. ಸಂಸ್ಥೆಯ ಮೆನೇಜರ್ ಸಂಪತ್ ಕುಮಾರ್ ಜೈನ್ ಮತ್ತು ಭವ್ಯಶ್ರೀ ಕಾಯ೯ಕ್ರಮ ನಿರೂಪಿಸಿದರು. ಜ್ಯೋತಿಕಾ ವಂದಿಸಿದರು.
