ನಾಳೆ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಲಕ್ಷದೀಪೋತ್ಸವ
Tuesday, November 18, 2025
ಬಂಟ್ವಾಳ: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಧಾನದಲ್ಲಿ ಲಕ್ಷದೀಪೋತ್ಸವ ಮತ್ತು ರಂಗಪೂ ನ.19 ರಂದು ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಬಿ. ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ 4.30ಕ್ಕೆ ಈಶ್ವರ ಸನ್ನಿಧಿಯಲ್ಲಿ ತುಲಾಭಾರ ಸೇವೆ, ರಂಗಪೂಜೆ, ಬಲ್ಲೋಡಿ ಮಾಗಣೆ ಗುತ್ತಿಯಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಲಕ್ಷದೀಪೋತ್ಸವದ ನಿಮಿತ್ತ ಕಾರಿಂಜೇಶ್ವರ ದೇವರು ಪಾರ್ವತಿ ಸನ್ನಿಧಿಗೆ ಆಗಮನ. ಕೊಡಮಣಿತ್ತಾಯ ದೈವದ ನೇಮ, ಪಾರ್ವತಿ ಪರಮೇಶ್ವರ ದೇವರ ಉತ್ಸವ ನಡೆಯಲಿದೆ. ಸಂಜೆ 7 ಗಂಟೆಯಿಂದ ನಿತ್ಯ ನರ್ತನಂ ನೃತ್ಯ ಕಾರ್ಯಕ್ರಮ ನಡೆಯಲಿದೆ.