ಜನಪ್ರಿಯತೆ ಸಹಿಸಲಾಗದೆ ಸುನಿಲ್ ಕುಮಾರ್ ತಂಡದಿಂದ ಅಪಪ್ರಚಾರ: ಉದಯ ಕುಮಾರ್ ಶೆಟ್ಟಿ
ಕಾರ್ಕಳ: ಜನಪರ ಆಡಳಿತ ಮತ್ತು ಪಂಚ ಗ್ಯಾರಂಟಿ ಯೋಜನೆಯ ಮೂಲಕ ಜನಮನ ಗೆದ್ದ ಕಾಂಗ್ರೆಸ್ ಸರಕಾರ ಹಾಗೂ ಯಾವುದೇ ಅಧಿಕಾರದ ಆಸೆ ಇಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಬೇಕು ಎಂಬ ಉದ್ದೇಶದಿಂದ ಕಾರ್ಕಳದ ಅಭಿವೃದ್ಧಿಯಲ್ಲಿ ತೊಡಿಸಿಕೊಂಡ ನನ್ನ ಜನಪ್ರಿಯತೆ ಯನ್ನು ಸಹಿಸಲಾಗದ ಅಧಿಕಾರ ದರ್ಪದಿಂದ ಮೆರೆಯುವ ಸುನಿಲ್ ಕುಮಾರ್ ತಂಡ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಕೆಲವೊಂದು ರಸ್ತೆ ಸರಿದಂತೆ ವಿವಿಧ ಅಭಿವೃದ್ಧಿ ವಿಚಾರದಲ್ಲಿ ಸಂಬಂಧಪಟ್ಟ ಸಚಿವರಲ್ಲಿ ಮಾತನಾಡಿ ಅನುದಾನ ಬಿಡುಗಡೆ ಮಾಡುವಲ್ಲಿ ಪ್ರಯತ್ನಿಸುತ್ತಿರುವಾಗ ಇದೇ ಸುನಿಲ್ ಕುಮಾರ್ ಅಡ್ಡಗಾಲು ಹಾಕಿತ್ತಿರುವುದು ಕಾರ್ಕಳದ ಅಭಿವೃದ್ಧಿಗೆ ಇವರ ಕೊಡುಗೆಯೇ. ತನ್ನಿಂದಲೇ ತಾನೇ ಮಾಡಿದ್ದೇನೆ ಎಂಬ ದುರಂಕಾರದ ವ್ಯಕ್ತಿ ಜನನಾಯಕನೇ. ಯಾವುದೇ ಅಧಿಕಾರ ಆಸೆಯಿಂದ ಬಂದಿಲ್ಲ ಜನರೊಂದಿಗೆ ಬೆರೆತು ಜನರ ಸೇವೆಗಾಗಿ ಕೆಲಸ ಮಾಡುತ್ತಿರುವುದು ಇವರಿಗೆ ಸಹಿಸಲಾಗುತ್ತಿಲ್ಲ. ಎಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಲಂಕಾರ, ಅಹಂಕಾರ, ಭ್ರಷ್ಟಾಚಾರವನ್ನು ತನ್ನ ಮನೆಯ ದೇವರು ಎಂದು ತಿಳಿದು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುವ ಸುನಿಲ್ ಕುಮಾರ್ ನೇರವಾಗಿ ಎದುರಿಸಲಾಗದೆ ತನ್ನ ಚೇಲಗಳಿಗೆ ಚಿಲ್ಲರೆ ಕಾಸು ನೀಡಿ ಅವರಿಂದ ಬಾಯಿಗೆ ಬಂದಂತೆ ಮಾತನಾಡಿಸುವ ಸುನಿಲ್ ಕುಮಾರ್ ಅವರ ಚಿಲ್ಲರೆ ಬುದ್ಧಿ ಎಲ್ಲರಿಗೂ ಗೊತ್ತಾಗಿದೆ. 21 ವರ್ಷಗಳಿಂದ ಸುನಿಲ್ ಕುಮಾರ್ ಅವರು ಕಾರ್ಕಳದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಆದರೂ ಏನು. ಕೇವಲ ಹಣ ಮತ್ತು ಅಧಿಕಾರ, ಭ್ರಷ್ಟಾಚಾರ ಇವರ ಬಂಡವಾಳ ಎಂದರು
ಮುನಿಯಾಲು ಪಡುಕುಡೂರು ರಸ್ತೆ ಸುಮಾರು 20 ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಹದಗೆಟ್ಟು ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ದುಸ್ತರವಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವ ಜನರು, ಮಹಿಳೆಯರು ಈ ರಸ್ತೆಯಲ್ಲಿ ದಿನ ನಿತ್ಯ ಸಂಚರಿಸುತ್ತಿದ್ದು ಕೆಟ್ಟದಾದ ರಸ್ತೆಯಿಂದ ನಿತ್ಯ ಬವಣೆ ಪಡುವಂತಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರಿಗೆ, ಗ್ರಾಮ ಪಂಚಾಯತ್ ಆಡಳಿತಕ್ಕೆ ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಉಪಯೋಗವಿಲ್ಲದ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಒದಗಿಸುವಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಸನ್ಮಾನ್ಯ ಸತೀಶ್ ಜಾರಕಿಹೊಳಿ ಅವರಿಗೆ ಸ್ವತಃ ನಾನೇ ದುಂಬಾಲು ಬಿದ್ದು ಅನುದಾನವನ್ನು ಮಂಜೂರುಗೊಳಿಸಲು ಸಾಕಷ್ಟು ಪರಿಶ್ರಮಪಟ್ಟಿದ್ದೇನೆ. ಅನುದಾನ ಮಂಜೂರಾದ ಕಾರಣ ಇದರ ಶ್ರೇಯಸ್ಸನ್ನು ಉದಯ ಶೆಟ್ಟಿ ಮುನಿಯಾಲು ಪಡೆದುಕೊಳ್ಳಬಾರದು ಎನ್ನುವ ಮತ್ಸರದಿಂದ ಬಿಜೆಪಿಯವರು ನನ್ನ ವಿರುದ್ದ ರಸ್ತೆ ಅಗೆದು ಹಾಳುಗೆಡಹಿದ ಸುಳ್ಳು ಅಪವಾದವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ದೇವಾಡಿಗ, ಮಾಜಿ ಪುರಸಭಾ ಅಧ್ಯಕ್ಷೆ ಪ್ರತಿಮಾ ರಾಣೆ, ಉಪಸ್ಥಿತರಿದ್ದರು.